ಬಹಳ ಕಾಡುತ್ತಿವೆಯೆ ನನ್ನೊಂದಿಗೆ ಕಳೆದ ಕ್ಷಣಗಳು,
ಅವನ್ನು ಬದುಕಿಗೆ ಮತ್ತೆ ಕೂಡ ಬೇಕೆನಿಸುತ್ತಿದೆಯೆ!?
ತಿರುಗಿ ಬಾ ಎಂದರೆ ಹೇಗೆ ತಾನೆ ಬರಲಿ ಹೇಳು
ನನ್ನ ಈ ಕತ್ತಲ ಗೋರಿಗೇನು ಬಾಗಿಲುಗಳಿವೆಯೇ!?
ಅವನ್ನು ಬದುಕಿಗೆ ಮತ್ತೆ ಕೂಡ ಬೇಕೆನಿಸುತ್ತಿದೆಯೆ!?
ತಿರುಗಿ ಬಾ ಎಂದರೆ ಹೇಗೆ ತಾನೆ ಬರಲಿ ಹೇಳು
ನನ್ನ ಈ ಕತ್ತಲ ಗೋರಿಗೇನು ಬಾಗಿಲುಗಳಿವೆಯೇ!?
10 comments:
ಗೋರಿಗೆ ಸೇರಿಸಿದ್ದ ಪ್ರೀತಿಗೆ..
ಗೋರಿ ಒಡೆದು ಹೊರ ತೆಗೆಯೋಕೆ ಸಾಧ್ಯವಿಲ್ಲವೇ?
wow...
sooperraagide!
ಚೆನ್ನಾಗಿದೆ...
ನೀವು ಯಾವ ಭಾವದಲ್ಲಿ ಬರೆದಿರೋ ಗೊತ್ತಿಲ್ಲ..... ಬಹುಶಃ ಮುಗಿದು ಹೋದ ಪ್ರೀತಿಯ ಕಥೆ ಇರಬಹುದು....
ಆದರೆ ನನಗನ್ನಿಸುತ್ತಿದೆ, ತುಂಬಾ ಪ್ರೀತಿಸುತ್ತಿದ್ದ ಎರಡು ಜೀವಗಳಲ್ಲಿ ಒಂದು ಈ ಲೋಕದಿಂದ ಹೋಗಿ ಇಲ್ಲಿರುವ ಜೀವಕ್ಕೆ ಹೇಳುತ್ತಿರಬೇಕು ಅನ್ನಿಸಿತು....
koneya saalu iddakkiddanthe hottikondu, ee chikka kavithege atee hecchu belaku needive...
Awesome..Shankar
ಭಾವಜೀವಿ... said...
shiv ಅವರಿಗೆ,
ಆ ಪ್ರೀತಿಯ ಕಾರಣದಿಂದಲೇ ನೊಂದು ಜೀವವೊಂದನ್ನು ಗೋರಿ ಗೆ ಸೇರಿಸಿ, ಆದರೆ ಈಗ ಪಶ್ಚಾತಾಪದ ಬೆಂಕಿಯಲ್ಲಿ ಮಣ್ಣಾದವನ ನೆನಪಾಗಿ, ಕ್ಷಣಗಳು ಯುಗವಾಗಿ ಕಾಡಿದಾಗ, ಒಳಗಿರುವ ಜೀವವು 'ಅಯ್ಯೋ' ನೊಂದು ಮಗ್ಗುಲಾಗಿ ಹೇಳಿರುವ ಸಾಲುಗಳಾಗಿವೆ ಎಂದು ವ್ಯಾಖ್ಯಾನಿಸಿದರೆ.. ನಿಮ್ಮ ಪ್ರಶ್ನೆಗೆ ಉತ್ತರ ದೊರೆತೀತು!!
ಕಾಲಸರಿದು ಹೋಗಿದೆ, ಹೊರಗಿನ ಜೀವಕ್ಕೂ, ಒಳಗಿರುವ ಜೀವಿಗೂ (!) ಈಗ ನಿಟ್ಟುಸಿರು, ಒಣಗಿದ ಕಂಬನಿಯ ಕರೆ ಅಷ್ಟೇ ಉಳಿದದ್ದು!!
ಹಾಗೆಯೇ ಹೊರಗಿರುವ ಜೀವಿಗೂ ತನ್ನ ಪ್ರೀತಿ ಇಲ್ಲದ ಈ ಪ್ರಪಂಚ ಒಂದು ರೀತಿ ಗೋರಿಯಂತೆಯೇ ತಾನೆ, ಆದರೆ ನೆಮ್ಮದಿಯೆಂದರೆ ಕಡೇ ಪಕ್ಷ ಅದಕ್ಕೆ ಸಾಯುವ ಆಯ್ಕೆಯಾದರೂ ಇದೆಯಲ್ಲವೆ!!
ಅಂದ ಹಾಗೆ Annapoorna Daithota ಅವರೆ ನಿಮ್ಮ ಸಂದೇಹಗಳಿಗೂ ಇಲ್ಲಿ ಪರಿಹಾರ ನೀಡಲು ಪ್ರಯತ್ನಿಸಿದ್ದೇನೆ ಎಂದು ನನ್ನ ಭಾವನೆ...!!
let me feel ಅವರೆ,
ಪ್ರೀತಿ ಎನ್ನುವುದನ್ನು ಕೆಲವರಿಗೆ ಬೆಳಕಾದರೆ, ಇನ್ನು ಕೆಲವರಿಗೆ ಅದು ಎದೆಯನ್ನು ಸುಟ್ಟು ಕರಕಲಾಗಿಸಿದ ಬೆಂಕಿಯಾಗಬಲ್ಲದು...!! ಎರಡರ ಮೂಲ ಒಂದೇ ಆದರೂ, ಸ್ವರೂಪ ಹಾಗು ಪರಿಣಾಮ ಬೇರೆ ಬೇರೆ ಅಲ್ಲವೆ.. ಧನ್ಯವಾದಗಳು ತಮ್ಮ ಪ್ರೀತಿಪೂರ್ವಕ ಕಮೆಂಟುಗಳಿಗೆ...
manjunatha ಹಾಗು ಶ್ರೀನಿಧಿಯವರೆ...
ತಮ್ಮಗಳ ಪ್ರಚೋದನಾತ್ಮಕ ಉದ್ಗಾರಗಳಿಗೆ...!! ತಲೆಬಾಗಿಸುವೆ :)
Very Good poem ...
ಚೆನ್ನಾಗಿದೆ...ಆದ್ರೆ ನಾನು ಕೇಳಿದ್ದ ಹಾಡು ಯಾವಗ ಬರುತ್ತೆ ನಿನ್ನ ಬ್ಲಾಗಲ್ಲಿ?
Thejkumar
ಧನ್ಯವಾದ, ನಿಮ್ಮ ಅಭಿಪ್ರಾಯಕ್ಕೆ..!!
ದಯವಿಟ್ಟು ನಿಮ್ಮ ಬಗ್ಗೆ ಇನ್ನಷ್ಟು ತಿಳಿಸಿದರೆ ಚೆನ್ನಾಗಿರುತ್ತಿತ್ತು!!
ನಿಮ್ಮ ಪ್ರೋಫೈಲ್ ತೆರೆದುಕೊಳ್ಳುತ್ತಿಲ್ಲ..!!
ಮನಸ್ವಿನಿ..
ಏನು, ಬಹಳದಿನಗಳಿಂದ ಪತ್ತೆನೆ ಇರಲಿಲ್ಲ!!??
ನಿನ್ನ ಆಗ್ರಹಕ್ಕೆ ಧನ್ಯವಾದಗಳು..
ನೀನು ಹೇಳಿದ್ದನ್ನ ಖಂಡಿತ ಬರೆಯುತ್ತೇನೆ, ಆದರೆ ಬಲವಂತವಾಗಿ ಏನೂ ಬರೆಯಬಾರದು ಅಂತ ನನ್ನ ವಾಡಿಕೆ!!
ಏನಾದರೂ ಕಾರಣ ಸ್ಫೂರ್ತಿ ಒದಗಿ ಬಂದರೆ ನೈಜತೆ, ಹೊಳಪು ಉಕ್ಕುತ್ತದೆ... ಬರೆದಿದ್ದಕ್ಕೂ, ಓದುಗರಿಗೂ ನ್ಯಾಯ ಒದಗಿಸದಂತಾಗುತ್ತದೆ. ಏನಂತೀಯ!?
ಪ್ರಯತ್ನವಂತೂ ಮುಂದುವರೆಸುತ್ತೇನೆ..
ಅಂದಹಾಗೆ, ಯಾರಾದರೂ, ಎಲ್ಲಿಯಾದರೂ ಸ್ಫೂರ್ತಿಯ ಸೆಲೆಯಾಗಿ ದೊರೆತಾರೆಂದು ಕಾಯುತ್ತಿದ್ದೇನೆ!! [;)]
Post a Comment