Tuesday, January 16, 2007

ಕಾರಣಗಳು

ಚಿಕ್ಕದೊಂದು ಕಾರಣ, ಅಪ್ಪ ಅಮ್ಮನೊಂದಿಗಿನ ಮುನಿಸು
ತೀರ ಬಾಲಿಶವಾಗಿ ಹಿಂದು ಮುಂದು ಯೋಚಿಸದೇ
ಆ ಹುಡುಗ ಸೀದ ನೇಣ ಕುಣಿಕೆಗೆ ಕೊರಳೊಡ್ಡಿದ್ದ
ಇದ್ದೊಬ್ಬ ಕುಡಿಯ ಸಾವಿನ ಹೊಡೆತ ತಾಳಲಾಗಲಿಲ್ಲ
ಮತ್ತೆ ಚಿಗುರುವ ಭರವಸೆ ಇರಲಿಲ್ಲ ಅವರಲ್ಲಿ
ಆ ಚಿತೆಯ ಬೆಂಕಿ ಅವರ ಬದುಕನ್ನು ಸುಡದಿರಲಿಲ್ಲ
ಮತ್ತೆ ಕೆಲವೇ ದಿನ, ಎಲ್ಲವನ್ನೂ ಬಿಟ್ಟು
ಮಗ ಕಾಲವಾದ ಮರದ ಇನ್ನೊಂದು ಬದಿಗೆ
ತಾವೂ ನೇತು ಬಿದ್ದರು ಹಗ್ಗದ ತುದಿಗೆ
ಇವರ ಬದುಕು ಬಾಳಲಾರಷ್ಟು ನಿಕೃಷ್ಟವಾಗಿತ್ತೆ?

ಮುಂಬಯಿಯ ರೈಲು ಸೇತುವೆಯೊಂದರಲ್ಲಿ
ಹಣ್ಣು ಹಣ್ಣು ಮುದುಕ, ಮುಗ್ಗಲು ಹಿಡಿದ ಬಟ್ಟೆಯೊಂದಿಗೆ
ಒಂದು ಕೈಯಲ್ಲಿ ಚಪ್ಪಲಿ ಇನ್ನೊಂದರಲ್ಲಿ ಭಿಕ್ಷೆ ಬಟ್ಟಲು
ತೆವಳುತ್ತಿದ್ದ ಜನರಿಂದ ಜನರೆಡೆಗೆ ಕೊಳೆತ ಕಾಲೆಳೆಯುತ್ತಾ
ಆದ್ರವಾಗಿ ಅನ್ನವನ್ನು ಬೇಡುತ್ತಾ, ಕರುಣೆಯ ಕೈಗಳಿಗಾಗಿ
ನೂಕ ನುಗ್ಗಲಿನಲ್ಲಿ ಯಾರೋ ಬೈಯ್ಯುತ್ತಿದ್ದರು ಆತನಿಗೆ
ಸಾಯಲು ಸಾಕಿತ್ತಲ್ಲವೇ ಈ ಸಂಪತ್ತು, ನೋವು ?

12 comments:

makuchaku said...

Used SCIM for this :P

Shankar said...

tumbha chennagidhe

ಭಾವಜೀವಿ... said...

Maku,
Yes I have used SCIM to input the charecter. But, by the way I can't read ur Name written over there! Appearing in unicode chareacters!

ಭಾವಜೀವಿ... said...

Shankar,
ಧನ್ಯವಾದಗಳು ನಿಮ್ಮ ಪ್ರಶಂಸೆಗೆ...!!

Shiv said...

ಭಾವಜೀವಿ,

ಮೊದಲ ಸಲ ನಿಮ್ಮ ಬ್ಲಾಗ್‍ಗೆ ಭೇಟಿ...

ಯಾಕೋ ಸಂಜೆಯ ರಾಗ ಓದಿದಾಗ ಕಣ್ಣುಗಳು ಹಾಗೇ ತುಂಬಿ ಬಂದವು..

ಹೊಟ್ಟಿಗೆ ಹಿಟ್ಟಿಲ್ಲದ, ತಲೆಗೊಂದು ಸೂರಿಲ್ಲದ, ಅಸರೆಗೆ ಒಂದು ಹೆಗಲಿಲ್ಲದ ಅದೆಷ್ಟು ವೃದ್ದಜೀವಗಳು ಹೀಗೆ ಸಂಕಷ್ಟ ಅನುಭವಿಸತಿರಬಹುದು :((

ತುಂಬಾ ಹೊತ್ತು ನಿಮ್ಮ ಕವನದ ಬಗ್ಗೆ ಯೋಚನೆ ಮಾಡ್ತಾ ಇದ್ದೆ..

ಭಾವಜೀವಿ... said...

Shiv,
ಸ್ವಾಗತ ನನ್ನ ಬ್ಲಾಗ್ ಪುಟಕ್ಕೆ...
ಇದು ನಾನೇ ಕಣ್ಣಾರೆ ಕಂಡ ಚಿತ್ರಣ, ಆ ದೃಶ್ಯ ಮನಕಲಕುವಂತಿತ್ತು!
ನಿಜಕ್ಕೂ ಅವರೆಂತ ಅಸಹಾಯಕ ಸ್ಥಿತಿಗೆ ತಲುಪಿರುತ್ತಾರೆಂದರೆ, ಸಾಯಲು ಇಚ್ಚಿಸಿದರೂ ಸಾಯಲು ಆಗುವುದಿಲ್ಲ ಅವರಿಗೆ (ಬದುಕ ಬೇಕೆಂಬ ಅದಮ್ಯ ಜೀವನೋತ್ಸಾಹ ಇದ್ದರೂ ಇರಬಹುದು!). ಇಂತಹ ಹತಭಾಗ್ಯರಿಗೆ ಈ ನನ್ನ ಸಾಲುಗಳು ಅರ್ಪಣೆ...
ಕವನಗಳು ಸಾರ್ಥಕ್ಯ ಪಡೆಯೋದೆ, ಅದು ನಿಮ್ಮಂತಾ ಓದುಗರ ಮನದ ಒಳತೋಟಿಯನ್ನು ಮುಟ್ಟಿದಾಗ.
ಧನ್ಯವಾದಗಳು... !!

Roopa said...

aalavada kavithegalu..chennagi baritira

ಭಾವಜೀವಿ... said...

ರೂಪ...
ಧನ್ಯವಾದಗಳು ನಿಮ್ಮ ಕಮೆಂಟುಗಳಿಗೆ...
ಮೊದಲನೇ ಘಟನೆ ಬಹಳ ಹಿಂದೆ ನನ್ನ ಹತ್ತಿರದ ಗೆಳೆಯನ ಕುಟುಂಬದಲ್ಲಿನ ಒಂದು ಪರಿವಾರದಲ್ಲಿ ನಡೆದಿದ್ದು..
ಎರಡನೆಯದು ಇತ್ತೀಚಿಗೆ ನಾನು ಮುಂಬಯಿಗೆ ಹೋದಾಗ ಲೋಕಲ್ ಟ್ರೈನಿಗಾಗಿ ಕಾಯುತ್ತಿದ್ದವನಿಗೆ ಕಂಡ ಚಿತ್ರ...ಮನಕಲಕಿದಂತಾಯಿತು...
ಅಂದೇ ಮೊದಲನೆಯದು ನೆನಪಾಯ್ತು.... ವಿಧಿಯ ವೈಚಿತ್ರಕ್ಕೆ, ಮನುಷ್ಯನ ಅಸಹಾಯಕತೆಯನ್ನು ನೆನೆದು ಮರುಗಿದ ಮನದ ತಳಮಳಕ್ಕೆ ಪರಿಹಾರವಾಗಿ ಈ ಸಾಲುಗಳು ಜನ್ಮ ತಾಳಿದವು...
ಸಂತೋಷ ಅವುಗಲು ನಿಮ್ಮ ಮನದಾಳವನ್ನು ತಲುಪಲು ಶಕ್ಯವಾಗಿದ್ದಕ್ಕೆ...!!

bhadra said...

ಬ್ಲಾಗು ಬಹಳ ಚೆನ್ನಾಗಿದೆ. ಸುಂದರ ಹೂ, ರಸಭರಿತ ಹಣ್ಣುಗಳ ತೋಟದಂತೆ ನಗು ನಗುತಿದೆ. ಇಂತೆಯೇ ಮುನ್ನಡೆಯುತ್ತಿರಲಿ.

ಮುಂಬಯಿಯಲಿ ಬಾಳಿದವ ಎಲ್ಲಿಯೂ ಬಾಳಿಯಾನು.
ಇಲ್ಲಿಯ ಲೋಕಲ್ ಟ್ರೈನ್ ಒಂದು ಪಾಠಶಾಲೆ
ಇನ್ನು ಭಿಕ್ಷುಕರ ಬಗ್ಗೆ ಹೇಳಲು ಅದು ಒಂದು ದೊಡ್ಡ ಕಥೆಯೇ ಆದೀತು.
ಒಂದೇ ಮಾತಿನಲಿ ಹೇಳಬೇಕೆಂದರೆ, ಗಟ್ಟಿ ಜೀವಿಯಾಗಿದ್ದರೆ, ಗಟ್ಟಿ ಮನಸ್ಸಿದ್ದವರಾಗಿದ್ದರೆ ಎಲ್ಲಿಯೂ ಬಾಳಬಲ್ಲರು. ಹುಸಿಮನಸಿನವರಾದರೆ ಎಲ್ಲಿಯೂ ಬಾಳಲಾರರು. ಇದು ಜೀವನದ ಮರ್ಮ.

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Annapoorna Daithota said...
This comment has been removed by the author.
Annapoorna Daithota said...

ನಿಮ್ಮ ಬ್ಲಾಗ್ ಲಿಂಕ್ ನೋಡಿದೆ.... ಬಂದು ಓದಿದೆ....
ಬಹಳ ಚೆನ್ನಾಗಿದೆ, ಮನಃಸ್ಪರ್ಶಿಯಾಗಿದೆ....

ಭಾವಜೀವಿ... said...

mavinasayana ದ ತವಿಶ್ರೀ ಅವರೆ
ಕ್ಷಮೆಯಿರಲಿ, ತಡವಾದ ಉತ್ತರಕ್ಕೆ!
ನಿಮ್ಮ ಸ್ಫೂರ್ತಿ ತುಂಬಿದ ಮಾತುಗಳಿಗೆ ನನ್ನ ನಮನಗಳು..
ನಿಜಕ್ಕೂ ಲೋಕಲ್ ರೈಲುಗಳು ಮುಂಬಯಿಯ ಜೀವನಾಡಿ ಇದ್ದ ಹಾಗೆ... ನಾನು ಮೊದಲು ನೋಡಿದಾಗ, ನಿಜಕ್ಕೂ ಮೂಕ ವಿಸ್ಮಿತನಾದೆ!! ಅಷ್ಟೊಂದು ಕ್ಲಿಷ್ಟಕರ ಜಾಲವನ್ನು ಹೊಂದಿದ್ದರೂ ಆ ಪರಿ ಯಶಸ್ವಿಯಾಗಿದ್ದು, ಹಾಗು ಅಷ್ಟು ಕರಾರುವಕ್ಕಾಗಿ ಅದರ ಕಾರ್ಯನಿರ್ವಹಣೆ ನಿಜಕ್ಕೂ ಅಮೋಘ!
ಮೊದಲ ಬಾರಿ ಹೋದವನಿಗೆ ಈ ತೆವಳುವ ಭಿಕ್ಷುಕ ಕಂಡ! ಅಂದು ಯಾವುದೋ ರೈಲು ತಡವಾಗಿದ್ದಕ್ಕೆ ಅಲ್ಲಿ ಒಂದು ದೊಡ್ಡ ಜಂಗುಳಿ ಉಂಟಾಗಿತ್ತು. ಆ ಜನಗಳ ಮಧ್ಯೆ ಅವನ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿತ್ತು.. ಕೆಲವೊಮ್ಮೆ ಅನಿವಾರ್ಯವಾಗಿ ಜೀವ ಹಿಡಿದುಕೊಂಡಿರುವ ಮನುಷ್ಯ ಎಷ್ಟೊಂದು ಅಸಹಾಯಕ ಸ್ಥಿತಿಗೆ ತಲುಪುತ್ತಾನಲ್ಲವೆ!!
ಹೀಗೆ ಬರುತ್ತಿರಿ ಹಣ್ಣಿಗಾಗಿ, ಹೂವಿಗಾಗಿ... ಆದರೆ ಹೊಸ ಹೂವು, ಹೊಸ ಹಣ್ಣು ದೊರೆಯದೇ ಇದ್ದರೆ ಬೇಸರವಾಗಬೇಡಿ..!!! ಸುಮ್ಮನೆ ಹರಟೋಣ!!
ಇನ್ನೊಮ್ಮೆ ಧನ್ಯವಾದಗಳು...