Friday, January 5, 2007

ನಾನವಳನ್ನು ಮರೆತು ಹಾಯಾಗಿದ್ದೇನೆ..!!

ನಿಜವಿದು ನಂಬುವುದಾದರೆ ನಂಬು
ನಾನವಳನ್ನು ಮರೆತು ಹಾಯಾಗಿದ್ದೇನೆ
ಎದೆಯಲ್ಲಿನ ಪ್ರೀತಿ ಎಂದೋ ಮಣ್ಣಾಗಿದೆ,
ನಾನವಳನ್ನು ಮರೆತು ಹಾಯಾಗಿದ್ದೇನೆ

ಬದಲಾದ ಹವೆಯಿಂದ ಸ್ವಲ್ಪ ಹಣ್ಣಾಗಿದ್ದೇನೆ
ಚಹರೆ ಒಂದಿಷ್ಟು ಬದಲಾಗಿದೆ
ಮತ್ತೆ ಮತ್ತೆ ಹೇಗಿದ್ದೀಯ ಎಂದು ಕೇಳಬೇಡ
ನಾನವಳನ್ನು ಮರೆತು ಹಾಯಾಗಿದ್ದೇನೆ

ನನ್ನ ವೇಷ ನೋಡಿ ಗಾಬರಿಯಾಗ ಬೇಡ
ನನ್ನ ಕಣ್ಣಲ್ಲಿ ಅವಳನ್ನು ಹುಡುಕಬೇಡ
ಹೀಗೆ ಬಿಡುಗಣ್ಣಲ್ಲಿ ನನ್ನ ನೋಡಬೇಡ
ನಾನವಳನ್ನು ಮರೆತು ಹಾಯಾಗಿದ್ದೇನೆ

ಇವಕ್ಕೇನು ಭ್ರಮೆಯೇ, ರಾತ್ರಿ ಇಡೀ
ನಿದ್ರೆ ಬಾರದೇ ಕಾಡಿಸುತ್ತದೆ
ಕಡೇ ಪಕ್ಷ ಅವಕ್ಕೂ ತಿಳಿಯದೇ
ನಾನವಳನ್ನು ಮರೆತು ಹಾಯಾಗಿದ್ದೇನೆ

ನೋವಿನ ದುರ್ಗಂಧವಾಗಿ
ನೀರವತೆ ಮನದೆಲ್ಲೆಡೆ ಹರಡುತ್ತಿದೆ
ಒಳ ಗೋಡೆಗಳಲ್ಲಿ ಯಾರಾದರೂ ಬರೆಯಬಾರದೆ
ನಾನವಳನ್ನು ಮರೆತು ಹಾಯಾಗಿದ್ದೇನೆ..!!

11 comments:

Anonymous said...

chennaagide

ಭಾವಜೀವಿ... said...

ಚೇತನ್
ಥಾಂks...!!

Shiv said...

ನಾನವಳನ್ನು ಮರೆತು ಹಾಯಾಗಿದ್ದೇನೆ !

ಅದಕ್ಕಿಂತ ನೋವಿನ ಸುಳ್ಳು ಇನ್ನೊಂದು ಇರಲಿಕ್ಕಿಲ್ಲ..


>ಇವಕ್ಕೇನು ಭ್ರಮೆಯೇ, ರಾತ್ರಿ ಇಡೀ
ನಿದ್ರೆ ಬಾರದೇ ಕಾಡಿಸುತ್ತದೆ
ಕಡೇ ಪಕ್ಷ ಅವಕ್ಕೂ ತಿಳಿಯದೇ
ನಾನವಳನ್ನು ಮರೆತು ಹಾಯಾಗಿದ್ದೇನೆ

ಈ ಸಾಲುಗಳು ಸತ್ಯವನ್ನು ಬಟ್ಟಬಯಲು ಮಾಡುತ್ತವೆ..

ನಿಮ್ಮ ಕಾವ್ಯಕೃಷಿ ಹೀಗೆ ಸಾಗಲಿ..

Annapoorna Daithota said...

ಹೌದು... ಕೆಲವೊಂದು ವಿಚಾರಗಳು ಹಾಗೇ.... ಮರೆತೆವೆಂದೆಕೊಂಡರೂ ಮನದಲ್ಲೆಲ್ಲೋ ಹುದುಗಿಕೊಂಡಿರುತ್ತವೆ, ಹೊರಜಗತ್ತಿಗೆ ಕಾಣಿಸದೇ ಹೋದರೂ ಒಳಗೇ ಸುರುಳಿ ಸುತ್ತುತ್ತಿರುತ್ತವೆ....

ಬಹಳ ಚೆನ್ನಾಗಿದೆ.....

Parisarapremi said...

nimma ashtu kavithegaLanna Odhide.. idhu nange thumba thumba hidsthu.. sakkath touching aagide..

nimma abhyanthara illa andre, nanna personal note book alli ee kavithe na mark maadkothini..

ಭಾವಜೀವಿ... said...

ಪರಿಸರಪ್ರೇಮಿಯವರೇ...
ಅನಂತ ಧನ್ಯವಾದಗಳು.. ಓದುಗರ ಮನತಟ್ಟಿದರೆ ಅದಕ್ಕಿಂತ ಸಾರ್ಥಕತೆ ಒಂದು ಕವನಕ್ಕಿದೆಯೆ!? ಇದಕ್ಕಿಂತ ಬೇರೆ ಪ್ರಶಸ್ತಿ, ಮನ್ನಣೆ ಬೇಕೆ!?
ನಿಮ್ಮ ವಯಕ್ತಿಕ ಪುಸ್ತಕದಲ್ಲಿ ಖಂಡಿತ ಗುರುತು ಹಾಕಿಕೊಳ್ಳಿ... !!
ಹೀಗೆ ಬರುತ್ತಿರಿ...!!

Anonymous said...

hai ಭಾವಜೀವಿ,
ಅವಳನ್ನು ಮರೆತಿದ್ದೆನೆ ಎಂದು ನೆನಪಿಸಿಕೊಳ್ಳುವ ಪರಿ ತುಂಬಾ ಚನ್ನಾಗಿ ಇದೆ.

ಭಾವಜೀವಿ... said...

ಧನ್ಯವಾದಗಳು ರಂಜು!!
"ಮರೆತೆನೆಂದರೆ ಹ್ಯಾಂಗೆ ಮರೆಯಲಿ ಅವನನ್ನ.." ಎನ್ನುವುದು ಸುಳ್ಳಲ್ಲ..
ನಾವು ಯಾರನ್ನು ಹೆಚ್ಚು ಮರೆಯಲು ಪ್ರಯತ್ನಿಸುತ್ತೇವೋ ಅವರೇ ಹೆಜ್ಜೆ ಹೆಜ್ಜೆಗೂ ನೆನಪಾಗ್ತಾರಲ್ವಾ!! ಏನೆನ್ನವುದು ಇದಕ್ಕೆ, ಯಾರಿಗೆ ಬಯ್ಯೋಣ ಹೇಳಿ, ಮರೆವಿಗೇ ಹೋಗದ ಅವಳ ನೆನಪಿಗೋ,ಮತ್ತೆ ಮತ್ತೆ ನೆನಪಿಸಿಕೊಳ್ಳೊ ಹುಚ್ಚು ಮನಸ್ಸಿಗೋ!!?

ಸಂತೋಷಕುಮಾರ said...

Ishta aytu, tumba tumba! nanavalanna maretiddeneyo ilvo gottilla! adre hayagantu illa.. manasina tumba avala hejje gurutugalu.. edeya angaladalli kadadida bhavanegala rangoli.. nanavalannu maretiddeneya?

ಭಾವಜೀವಿ... said...

ಧನ್ಯವಾದಗಳು! ಮರೆಯುವುದು ಹಾಗು ಹಾಯಾಗಿರುವುದು ಎರಡೂ ಒಂದಕ್ಕೊಂದು ವಿರುದ್ಧ ಪದಗಳು ಅಷ್ಟೆ! ನೀವು ಅವಳನ್ನು ಮರೆಯಬಾರದು ಎಂದು ಕೊಂಡು ಮರೆಯಲು ಪ್ರಯತ್ನಿಸುತ್ತಿದ್ದೀರಿ ಅದಕ್ಕೆ ನಿಮಗಿನ್ನೂ ಮರೆಯಲಾಗುತ್ತಿಲ್ಲ! ಕಾಲಕ್ಕಿಂತ ಔಷಧ ಬೇರೋಂದಿಲ್ಲ! ಕಾಲನ ಡಾಕ್ಟರಿಕೆಯಲ್ಲಿ ಎಲ್ಲಾ ಗಾಯಗಳು ಮಾಯುತ್ತವೆ! ಅದೇ ಪ್ರಪಂಚದ ನಿಯಮ. ತೆಳುವಾದ ಕಲೆಗಳು ಮಾತ್ರ ಸಾಯುವವರೆಗೂ ಉಳಿಯಬಹುದಷ್ಟೆ, ಅವಳ ಹೆಜ್ಜೆ ಗುರುತುಗಳಾಗಿ!

anu said...

Dont know what to say. sheeshike odida koodale odabaaradu andukonde. yako manasu kelalilla matte odabeku anistu odide. adanna baredavana novu sankata himse nenasikondu kannalli neeru bantu. yaake? haleya modala preeti nenapige banda? gottilla