Wednesday, February 28, 2007

ನನ್ನದಲ್ಲ...

ಆಗೆಲ್ಲಾ ಅವನ ಕಣ್ಣೊಳಗೆ ನನ್ನದೇ ಬಿಂಬವಿರುತ್ತಿತ್ತು
ಈಗೀಗ ನನ್ನೆದೆಯ ಕನ್ನಡಿಯಲ್ಲೂ ನಾನು ಕಾಣುತ್ತಿಲ್ಲ

ನನ್ನೊಳಗೇನಿತ್ತು ಇಂದಿಗೂ ಅವನಲ್ಲದೆ
ನಾನು ಈಗಲೂ ಅಲ್ಲಿದ್ದೇನೆಯೆ? ಸಾಧ್ಯವೇ ಇಲ್ಲ

ಸತ್ತ ಕನಸುಗಳನ್ನು ಎಡವಿ ಮುಗ್ಗರಿಸುತ್ತಿದ್ದೇನೆ
ನನ್ನೊಳಗೇನಿದೆ ಬರಿಯ ಕತ್ತಲೆಯಷ್ಟೆ, ಬಣ್ಣವಿಲ್ಲ

ಅವನ ಪ್ರೀತಿಗೆ ನನ್ನ ಹಕ್ಕಿನ ಮಾತು ಹಾಗಿರಲಿ
ಬೇಸರವಿಷ್ಟೆ ಈ ನೋವು ಸಹ ಅವನ ಸ್ವತ್ತೇ, ನನ್ನದಲ್ಲ!

3 comments:

Pramod P T said...

oLLeya kavana...

..... said...

Shankar,

ಸತ್ತ ಕನಸುಗಳನ್ನು ಎಡವಿ ಮುಗ್ಗರಿಸುತ್ತಿದ್ದೇನೆ..
intha sundara kalpanegalondhige nimma kavanagalu tumbaa aakarshakavaagi moodi bartide..
haagene, kavitheya sandharbhada bagegoo ondhu hint kodi..just curiousity ashte...
Nice one...
Have a nice day

Anonymous said...

ನೀವು ತು೦ಬಾ ಭಾವತ್ಮಕರು ಅ೦ತ ಅನಿಸುತ್ತಿದೆ
ನಿಮ್ಮ ಅಲೋಚನೆ ಭಾವನೆಗಳನ್ನ ವ್ಯಕ್ತಪಡಿಸಿರುವ ರೀತಿಯನ್ನ
ನೋಡ್ತಾ ಇದ್ದರೆ ...........
ಸ್ವಲ್ಪ ಸ೦ತೋಷ,ದುಃಖ ಆಗುತ್ತೆ.......
ಯಾಕೋ ಗೊತ್ತಿಲ್ಲ ?