ಸ್ವಾಥ೯ ಜನರ ಮಧ್ಯೆ ಅಥ೯ವಿರದೆ ಹೋದ
ಪ್ರೀತಿಗಾಗಿ ದುಖಿಃಸುವುದನ್ನು ನಿಲ್ಲಿಸಿದ್ದೇನೆ
ಮುಳ್ಳುಗಳು ಸಾಕೆನಿಸಿವೆ ನನಗೆ, ನನ್ನದೇ
ಎದೆಯಂಗಳದಲ್ಲಿ ಹೂ ಅರಳಿಸುವುದನ್ನು ನಿಲ್ಲಿಸಿದ್ದೇನೆ
ವಿನಾಕಾರಣವಾಗಿ ಪ್ರೀತಿಸಿದ್ದು ಅವರಿಗೆ ಬೇಡವಾಯಿತು,
ಈಗ ಕಾರಣವಿದ್ದರೂ ದ್ವೇಷಿಸುವುದನ್ನೂ ನಿಲ್ಲಿಸಿದ್ದೇನೆ
ಅವರವರ ಹಣೆಬರಹಕ್ಕೆ ತಕ್ಕಂತೆ ಬದುಕಲಿ,
ಅವರಿಗಾಗಿ ನನ್ನ ಹಣೆಯನ್ನು ಬರಿದಾಗಿಸುವುದನ್ನು ನಿಲ್ಲಿಸಿದ್ದೇನೆ
ಅವರ ನೋವುಗಳನ್ನು ಓದಿ ಅನಕ್ಷರಸ್ಥನಾದೆ,
ಇದೀಗ ನನ್ನದೇ ಸಾಲುಗಳನ್ನ ಬರೆಯುವುದನ್ನ ನಿಲ್ಲಿಸಿದ್ದೇನೆ..
ಪ್ರೀತಿಗಾಗಿ ದುಖಿಃಸುವುದನ್ನು ನಿಲ್ಲಿಸಿದ್ದೇನೆ
ಮುಳ್ಳುಗಳು ಸಾಕೆನಿಸಿವೆ ನನಗೆ, ನನ್ನದೇ
ಎದೆಯಂಗಳದಲ್ಲಿ ಹೂ ಅರಳಿಸುವುದನ್ನು ನಿಲ್ಲಿಸಿದ್ದೇನೆ
ವಿನಾಕಾರಣವಾಗಿ ಪ್ರೀತಿಸಿದ್ದು ಅವರಿಗೆ ಬೇಡವಾಯಿತು,
ಈಗ ಕಾರಣವಿದ್ದರೂ ದ್ವೇಷಿಸುವುದನ್ನೂ ನಿಲ್ಲಿಸಿದ್ದೇನೆ
ಅವರವರ ಹಣೆಬರಹಕ್ಕೆ ತಕ್ಕಂತೆ ಬದುಕಲಿ,
ಅವರಿಗಾಗಿ ನನ್ನ ಹಣೆಯನ್ನು ಬರಿದಾಗಿಸುವುದನ್ನು ನಿಲ್ಲಿಸಿದ್ದೇನೆ
ಅವರ ನೋವುಗಳನ್ನು ಓದಿ ಅನಕ್ಷರಸ್ಥನಾದೆ,
ಇದೀಗ ನನ್ನದೇ ಸಾಲುಗಳನ್ನ ಬರೆಯುವುದನ್ನ ನಿಲ್ಲಿಸಿದ್ದೇನೆ..
10 comments:
ಚೆನ್ನಾಗಿದೆ.
Ee ninna nintha baduku odidekano..!! aa 'ninnavaru'??!! andukondavara bagegina ninna kalakali kandu naanu mookanaade...!!!
Thumbane chennagide... nanna prakara.. idu kevala bareyalu bareda kavana valla... idu nimma Hrudaylada matugalu antha anisuthide..
ನಾಡುನುಡಿಗೆ
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..
ತಾವು ಯಾರೆಂದು ಗೊತ್ತಿಲ್ಲ...ತಿಳಿಸಿದರೆ ನಾನು ಆಭಾರಿಯಾಗಿರುತ್ತೇನೆ...
ನಿಮ್ಮ ಅನಿಸಿಕೆಯ ಬಗ್ಗೆ ಹೇಳಬೇಕೆಂದರೆ...ಸ್ವಲ್ಪ ಅಲ್ಲ ಸ್ವಲ್ಪ ಹೌದು..!!
ಭಾವಜೀವಿಗಳೇ,
ಇದು ಅನುಭವದ ದಾರಿಯಲ್ಲಿ ಹೆಕ್ಕಿ ತಂದ ಕವನ..
ನನ್ನ ಒಂದೇ ಪ್ರೀತಿಯ ಸಲಹೆ..ಎದೆಯಂಗಳದಲ್ಲಿ ಹೂ ಅರಳಿಸುವದನ್ನು ನಿಲ್ಲಿಸಬೇಡಿ..ಹಾಗೇ ಸಾಲುಗಳನ್ನು ಬರೆಯುವುದನ್ನು ನಿಲ್ಲಿಸಬೇಡಿ..
ಜೀವನವೆಂಬುದು ಒಂದು ತೋಟ..ಅಲ್ಲಿ ಹೂವು-ಮುಳ್ಳು ಇದ್ದದ್ದೇ
ಹಾಗೇ ಅದೊಂದು ಮಹಾಕಾವ್ಯ..ಅಲ್ಲಿ ದ್ವೇಷ-ಪ್ರೀತಿ ಇದ್ದದ್ದೇ..
ಗೊತ್ತು ಇದೆಲ್ಲಾ ಗೊತ್ತಿದ್ದರು..ಮನಸು ಮತ್ತೆ ಮರಳಿ ಬರದವರ ಬಗ್ಗೆ ಮರುಕುತ್ತದೆ.
ಶಿವ್...!!
ನಿಜ, ಕಾಲ್ಪನಿಕಕ್ಕಿಂತ ಅನುಭವ ಕವನಕ್ಕೆ ಹೆಚ್ಚಿನ ಜೀವ ತುಂಬುತ್ತವೆ..
ಯಾವುದೊ ನೋವಿನಲ್ಲಿ ನಾನು ಇನ್ನೆಂದೂ ಎದೆಯಲ್ಲಿ ಹೂವರಳಿಸುವುದಿಲ್ಲ ಎಂದಿದ್ದೆ ನಿಜ.... ಆದರೆ, ಕಾಲಕ್ಕಿಂತ ಬೇರೆ ಔಷಧವಿದೆಯೆ!!? ಅದರ ಡಾಕ್ಟರಿಕೆಯಲ್ಲಿ ಎಲ್ಲ ಗಾಯಗಳು ಮಾಯುತ್ತವೆ!! (ಮುಳ್ಳಿನಿಂದಾದ ಗಾಯದ ಕುರುಹು, ಹೂವಿನ ನೆನಪನ್ನಂತೂ ಮಾಯಲು ಬಿಡುವಿದಿಲ್ಲ!!). ನಾವು ಎಷ್ಟೇ ಪ್ರಯತ್ನಿಸಿ, ಎದೆಯನ್ನು ಬರಡಾಗಿಸಿಟ್ಟರೂ, ತಂಗಾಳಿಯು ಎಲ್ಲಿಂದಲೂ ತಂದ ಬೀಜವನ್ನು,ಸಣ್ಣ ಸೋನೆಮಳೆ,ಮೊಳಕೆ ತರಿಸಿ, ಗಿಡವಾಗಿ ಚಿಗುರಿಸಿ, ನಮಗೆ ಗೊತ್ತಿಲ್ಲದಂತೆ ಪುಟ್ಟ ಹೂವನ್ನು ಅರಳಿಸಿ ಹೋಗುತ್ತದೆ...!! ಇದು ಎಲ್ಲ ಮನುಷ್ಯ ಪ್ರಯತ್ನವನ್ನು ಮೀರಿದ್ದು, ಹಾಗು ಬರಡನ್ನು ಬದುಕಾಗಿಸುವುದೇ ಜಗದ ನಿಯಮ...!! ಅಲ್ಲವೇ!!??
ಅನಂತ ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ..!! ಖಂಡಿತ ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆ... ಜಗದೆದುರು ನನ್ನ ಎದೆಯನ್ನು ಬಿಚ್ಚಿಡುತ್ತಾ...ಬರೆಯುತ್ತೇನೆ.. ನಿಮ್ಮಂತವರ ಹಾರೈಕೆ ಸದಾ ಕಾಯಲಿ..
ಚೆನ್ನಾಗಿದೆ....
ಇದೀಗ ನನ್ನದೇ ಸಾಲುಗಳನ್ನ ಬರೆಯುವುದನ್ನ ನಿಲ್ಲಿಸಿದ್ದೇನೆ..
idanneMdogU nillisabEDi.
manadaaLada maatugaLu bahu caMdadi mUDive.
baraha kAyaka anavarata saagali.
oLLeyadaagali
Annapoorna Daithota ಅವರೆ..
ಆಭಾರಿ ನಿಮ್ಮ ಅಭಿಪ್ರಾಯಕ್ಕೆ... ಹೀಗೆ ಬರುತ್ತಿರಿ!
srinivas ಅವರೆ,
ಬರೆಯುವ ಕಾಯಕವನ್ನು ಎಂದಿಗೂ ಬಿಡುವುದಿಲ್ಲ, ಅದಕ್ಕಿಂತ ನೆಮ್ಮದಿಯ ಕಾಯಕ ಇನ್ನೊಂದಿಲ್ಲ ನನಗೆ.. ಬದುಕೇ ಒಂದು ಬರಹವಲ್ಲವೆ? ನಾವೆಲ್ಲಾ ಬರೆಯುತ್ತಿರೋಣ, ಮನದ,ನೋವನ್ನ, ನಲಿವನ್ನ, ಪ್ರೀತಿಯನ್ನ,ಕಳಕಳಿಯನ್ನ, ಒಟ್ಟಿನಲ್ಲಿ ಎಲ್ಲ ಭಾವನೆಗಳನ್ನ ಮೂಲಕ ಹೊರ ತರೋಣ. ಬೆಳೆಯುವ ಜಗದೊಂದಿಗೆ ನಾವು ಬೆಳೆಯೋಣ ಎನ್ನುವ ಆಶಾವಾದದೊಂದಿಗೆ...
ತಮ್ಮಂತಹ ಹಿರಿಯರ ಆಶೀರ್ವಾದ ಹಾಗು ಮಾರ್ಗದರ್ಶನ ನಮ್ಮನ್ನು ಸದಾ ತಿದ್ದಿ ಸರಿಯಾದ ಹಾದಿಯಲ್ಲಿಡಲಿ ಎಂದು ಪ್ರಾರ್ಥನೆ..!!
ಧನ್ಯವಾದಗಳೊಂದಿಗೆ...
Tumbha chennagide. Dhanyavadagalu.
Post a Comment