Monday, May 7, 2007

ಸಾಸಿವೆ

ಇದ್ದಕಿದ್ದಂತೆ ಎದೆ ಹಿಡಿದು
ನೆಲಕ್ಕೊರಗಿದರು ತೇಜಸ್ವಿ ,
ಶಾಲೆಯಿಂದ ಹೊರಟ ಕಂದ
ಬಸ್ಸ ಹೊಡತಕ್ಕೆ ಉತ್ತರಿಸದಾಯಿತು,
ಎಲ್ಲವನ್ನೂ ಎತ್ತಿ ಎಸೆಯುವ ನೀನು
ಸಾವಿನ ಎದುರು ತರಗೆಲೆಯಾಗಿರುವೆಯಲ್ಲ!?
ಬುದ್ಧನಿಗೆಂದು ಸಿಕ್ಕೀತು ಒಗ್ಗರಣೆಗೊಂದಿಷ್ಟು
ಸಾಸಿವೆ!!?


10 comments:

ಸುಪ್ತದೀಪ್ತಿ suptadeepti said...

ಬುದ್ಧನಿಗಲ್ಲ ಸಾಸಿವೆ ಬೇಕಾಗಿದ್ದು, ಕಿಸಾಗೌತಮಿಗೆ. ನಮ್ಮ ಅರಿವಿಗೆ ನಿಲುಕದ ವಿಷಯದ ಹಿಂದಟ್ಟಿ ಹೋಗುವುದು ಕಲಿಕೆ ತಾನೇ? ಅದೇ ಸತ್ಯ.

ಭಾವಜೀವಿ... said...

ಧನ್ಯವಾದಗಳು ನನ್ನನ್ನು ತಿದ್ದಿದ್ದಕ್ಕೆ..!!
ಆದರೆ ಮಗುವನ್ನು ಬದುಕಿಸಿ ಕೊಡು ಎಂದು ತನ್ನ ಬಳಿಗೆ ಬಂದ ಕಿಸಾ ಗೌತಮಿಗೆ ಬುದ್ದನೇ ಅಲ್ಲವೆ "ಸಾವಿರದ ಮನೆಯಿಂದ ಸಾಸಿವೆ ತಾ" ಎಂದು ಹೇಳಿದ್ದು!!? ನಿಜ ಬುದ್ಧನಿಗೆ ಸಾವಿನ ಹಿಂದಿನ ಭಾವನೆಗಳನ್ನು ಗೆದ್ದಿದ್ದ, ಆದರೆ ಹಿಂದೊಮ್ಮೆ, ಪೂರ್ವಾಶ್ರಮದಲ್ಲಿ ಆತ ರಾಜಕುವರನಾಗಿದ್ದ ಆತ, ಜನರ ಸಾವು ನೋವುಗಳಿಂದ ವಿಚಲಿತನಾಗಿಯೇ ಅಲ್ಲವೆ ರಾಜ್ಯ, ಅರಮನೆ, ಹೆಂಡತಿಯನ್ನೆಲ್ಲಾ ಬಿಟ್ಟು ನಡೆದಿದ್ದು.. ಆಗಲೂ ಆತ ಚಡಪಡಿಸಿದ್ದು ಸಾವನ್ನು ಗೆಲ್ಲಬೇಕೆಂದೇ ಅಲ್ಲವೆ!!?
ಕ್ಷಮಿಸಿ ನನ್ನದು ಅಜ್ಞಾನವಾಗಿದ್ದರೆ.. ನನಗೆ ಎಲ್ಲೊ ಓದಿದ ನೆನಪು..

ಸುಪ್ತದೀಪ್ತಿ suptadeepti said...

ನಿಮ್ಮ ಜ್ಞಾನದ ಪರೀಕ್ಷೆ ನಡೆಸುತ್ತಿಲ್ಲ ನಾನು. ನನ್ನ ತಿಳುವಳಿಕೆಯಂತೆ, ಸಿದ್ಧಾರ್ಥ ಬುದ್ಧನಾದಾಗ ಅವನಿಗೆ ಮತ್ಯಾವ ಸಾಸಿವೆಯ ಅಗತ್ಯವೂ ಇಲ್ಲ. ರಾಜಕುಮಾರನ ಅಪಕ್ವತೆ, ಅಜ್ಞಾನ ಅವನನ್ನು ಸಾವು-ನೋವನ್ನು ಗೆಲ್ಲುವೆಡೆ ಪ್ರೇರೇಪಿಸಿತು. ಆದರೆ, ಬುದ್ಧನಿಗೆ ದೊರಕಿದ್ದ ಬುದ್ಧಿಬೆಳಕಿನಲ್ಲಿ ಅವನು ಸಿದ್ಧಾರ್ಥನಾಗಿ ಉಳಿದಿರಲೇ ಇಲ್ಲ, ಅವನಿಗೆ ಯಾವ ಭೌತಿಕ ವಸ್ತುವಿನ ಆಧಾರ ಬೇಕಾಗಿಲ್ಲ ಅನ್ನುವುದಷ್ಟೇ ನನ್ನ ಅಭಿಪ್ರಾಯ. ಕಿಸಾ ಗೌತಮಿಗೆ ಅರಿವು ತೋರುವುದಕ್ಕಾಗಿ ಆಕೆಯನ್ನು ಸಾಸಿವೆ ತಾರೆಂದು ಕಳಿಸಿದನೇ ಹೊರತು ಅದು ಆತನಿಗಾಗಿ ಅಲ್ಲ. ಇದಿಷ್ಟು ನಾನು ಅರಿತುಕೊಂಡ ರೀತಿ, ಅಷ್ಟೇ.

Shiv said...

>>ಸಾವಿನ ಎದುರು ತರಗೆಲೆಯಾಗಿರುವೆಯಲ್ಲ!?
ಜೀವನ ಹಾಗೇ ಅಲ್ವಾ :((

ಸಿಂಧು sindhu said...

ಸಾವಿರದ ಮನೆಯ ಸಾಸಿವೆ ಬೇಕಿದ್ದಿದ್ದು ಕಿಸಾಗೌತಮಿಗೇ!

ಆದ್ರೂ ನಿತ್ಯದ ಆಗುಹೋಗುಗಳನ್ನ ಬುದ್ಧನ ವಿಚಾರಕ್ಕೆ ನೀವು ಸಮನ್ವಯಿಸಿದ ರೀತಿ ಚೆನ್ನಾಗಿದೆ.

ಕವಿತೆಯ ಭಾವಾರ್ಥ ಅದೇ ಅಲ್ಲವೇ "ಸಾಸಿವೆ" ಯಷ್ಟು ಸೂಕ್ಶ್ಮದ ಸಾವಿನ ಹಿರಿಮೆ.

Anonymous said...

Superb Shankar.. Even though I studued with you I never knew that you can write wonderful kavanas like this.

You are very very emotional person.

ಭಾವಜೀವಿ... said...

shiv,
ನಿಜ ಅದೇ ಸತ್ಯ, ಪರಮಸತ್ಯ.. ಆದರೆ ಕೆಲವು ಬಾರಿ ಅದನ್ನು ಮರೆತ ಮನುಷ್ಯ ಅಹಂಕಾರಿಯಾಗುತ್ತಾನಲ್ಲ, ಸಣ್ಣತನ ತೋರುತ್ತಾನಲ್ಲ!? ಅದಕ್ಕೇನನ್ನುತ್ತೀರ!?

ಸಿಂಧು,
ಧನ್ಯವಾದಗಳು, ನೀವು ಈ ಕಡೆ ಬರೋದೆ ಅಪರೂಪವಾಗಿತ್ತು. ಖುಷಿಯಾಯ್ತು ನಿಮ್ಮ ಹೆಜ್ಜೆ ಗುರುತಾದ ಕಮೆಂಟನ್ನು ನೋಡಿ!
ಹಾಗೆ ಕವನಕ್ಕೆ ಹೊಸ ಸೂಕ್ಷತೆಯನ್ನು ಒದಗಿಸದ್ದಕ್ಕೆ!

ಅನಾಮಧೇಯ!
ಧನ್ಯವಾದಗಳು..
ತಾವು ಯಾರೆಂದು ತಿಳಿಯಲಿಲ್ಲ.. !! ಸರಿ ನಾನೆ ಊಹಿಸುತ್ತೇನೆ.... ಬೆನಕ!?

Anonymous said...

no Shankar, nimage naanu yarendu guess maadalu sAdyane illa..

Shree said...

ಶಂಕರ್,
ನಿಮ್ಮ ಬ್ಲಾಗಿನಲ್ಲಿ ನೀವು ಕಣ್ಣಿಗೆ ಹಿತವೆನಿಸುವ ಬಣ್ಣದ ಕಾಂಬಿನೇಶನ್-ಗಳನ್ನು ಅಕ್ಷರಗಳಿಗೆ ಮೆತ್ತಿದರೆ, ಬ್ಯಾಕ್-ಗ್ರೌಂಡ್ ಬಣ್ಣಾಕ್ಕೆ ಹೊಂದುವಂತಹ ಬಣ್ಣಗಳನ್ನು ಉಪಯೋಗಿಸಿದರೆ, ಊಟಕ್ಕೆ ಅಪ್ಪೆಮಿಡಿ ಉಪ್ಪಿನಕಾಯಿ ಸಿಕ್ಕಹಾಗಿರುತ್ತದೆ..:) ಇನ್ನಷ್ಟು ಚೆನ್ನಾಗಿರುತ್ತದೆ..:)

ಭಾವಜೀವಿ... said...

ಶ್ರೀ
ಅಭಾರಿ ನಿಮ್ಮ ಸಲಹೆಗೆ.. ನೀವಂದಂತೆ ಒಂದಿಷ್ಟು ಬದಲಾವಣೆಗಳನ್ನು ತಂದಿದ್ದೇನೆ. ಅಪ್ಪೆ ಮಿಡಿ ಅಲ್ಲದಿದ್ದರೂ ಉಪ್ಪಿನಕಾಯಂತು ಆಗಿದೆ ಎಂದು ನನ್ನ ನಂಬಿಕೆ.. !! ಏನಂತೀರ!!