Wednesday, May 2, 2007

ವಾಸ್ತವತೆ

ಕತ್ತಲೆಯು ಕಾಣದ ಕಣ್ಣುಗಳ
ಕೇವಲ ಕುರುಡು ಕಲ್ಪನೆಯಷ್ಟೆ!
ಕಂಡದ್ದೆಲ್ಲವನ್ನು ಕುಡಿದು ಕುಪ್ಪಳಿಸುವ
ಬೆಳಕು ಎಂದಾದರೂ ಬಳಲೀತೆ!?

ಕಂಡ ಕಂಡಲ್ಲೆಲ್ಲಾ ಸುಳ್ಳನ್ನು ಬಿತ್ತಿ,
ಹಣವನ್ನು ಹನಿಸಿ ಹುಸಿ ಹೂವ ಹುಟ್ಟಿಸಿ,
ಕಾಯಿ ಕಟ್ಟಿಸಿದರೂ ಸತ್ಯವೆಂದಾದರೂ
ಸಹಿಸಿ ಸುಮ್ಮನಾದೀತೆ!?

9 comments:

Vijendra ( ವಿಜೇಂದ್ರ ರಾವ್ ) said...
This comment has been removed by the author.
Vijendra ( ವಿಜೇಂದ್ರ ರಾವ್ ) said...

ಕಂಡ ಕಂಡಲ್ಲೆಲ್ಲಾ ಸುಳ್ಳನ್ನು ಬಿತ್ತಿ,
ಹಣವನ್ನು ಹನಿಸಿ ಹುಸಿ ಹೂವ ಹುಟ್ಟಿಸಿ,
ಕಾಯಿ ಕಟ್ಟಿಸಿದರೂ ಸತ್ಯವೆಂದಾದರೂ
ಸಹಿಸಿ ಸುಮ್ಮನಾದೀತೆ!?
Superb Lines !!

ಒಂದೇ ಒಂದು ಶಬ್ಧ.. "ಅಧ್ವಿತೀಯ"

Shree said...
This comment has been removed by the author.
Shree said...

yaakri beLakaMdre ashTu kopana? Satya sahisi summnaagallla ankonDiddeera?

ಭಾವಜೀವಿ... said...

SHREE,
ಧನ್ಯವಾದಗಳು ಇಂತಹದೊಂದು ಕಮೆಂಟಿಗೆ!!
ನನಗ್ಯಾತರ ಕೋಪ!? ಅದು ಅನಂತವಾದ ಬೆಳಕಿನ ಮೇಲೆ!!?
ಸತ್ಯದ, ಬೆಳಕಿನ ಬಗ್ಗೆ ನನ್ನಂತಹ ಹುಲು ಮಾನವನ ಕೋಪ ದವಡೆಗೆ ಮೂಲವಾದೀತು!!
ಅದೇನೆ ಇರಲಿ, ಜಗತ್ತಿನಲ್ಲಿ ಕತ್ತಲೆ ಇಲ್ಲದೇ ಇದ್ದರೆ ಬೆಳಕಿನ ಮಹತ್ವ ಎಲ್ಲಿದ್ದೀತು!? ಕತ್ತಲೆ ಇದ್ದಿದ್ದರಿಂದಲೇ ಅಲ್ಲವೆ ಅದನ್ನು ತಿಳಿಯಾಗಿಸುವ ಕಾಯಕಕ್ಕೆ ಬೆಳಕು ಇಳಿದಿದ್ದು..!? ಅಸತ್ಯವೇ ಇಲ್ಲದಿದ್ದರೆ ಎಲ್ಲವೂ ಸತ್ಯವೇ ಆಗಿರುತ್ತಿತ್ತು!? ಈ ರೀತಿಯದು ಒಂದು ಹೈಪೋಥಿಟಕಲ್ ಪ್ರಪಂಚವೆನಿಸಿದರೂ, ಇವೆಲ್ಲಾ ಒಂದಕ್ಕೊಂದು ಪೂರಕ ತಾನೆ..!!? ಅದನ್ನೆ ಇಲ್ಲಿ ನಾನು ಹೇಳ ಬಯಸಿದ್ದು!!

Pramod P T said...

"ಹಣವನ್ನು ಹನಿಸಿ ಹುಸಿ ಹೂವ ಹುಟ್ಟಿಸಿ" ಮಸ್ತ್ ಬಿಡಿ!!

ಬಾನಾಡಿ said...
This comment has been removed by the author.
ಸಿಂಧು sindhu said...

ಇದೇ ವಾಸ್ತವತೆಯ?
ನೇತಿ..
ನ ಇತಿ.. ನ ಇತಿ.. ಅನ್ನಿಸುತ್ತಿದೆ.. :)

ಕಂಡದ್ದೆಲ್ಲ ಕುಡಿದು ಕುಪ್ಪಳಿಸುವ - ಕಲ್ಪನೆ ವಿಶಿಷ್ಟವಾಗಿದೆ.

ಭಾವಜೀವಿ... said...

ಧನ್ಯವಾದ ಪ್ರಮೋದ್!!
ನಿಮ್ಮ ಮಸ್ತ್ ಕಮೆಂಟಿಗೆ!!

ಸಿಂಧು,
ಇದೇ ವಾಸ್ತವ ಅನ್ನುವುದಕ್ಕಿಂತ, ಇದು ವಾಸ್ತವ ಅನ್ನುವುದು ನಿಮ್ಮ ಪ್ರಶ್ನೆಗೆ ಉತ್ತರವಾದೀತು!
ನಿಜ, ಇಂದಿನ ಪರಿಸ್ಥಿತಿಯಲ್ಲಿ ಸತ್ಯದ ಉಳಿವಿನ ಬಗ್ಗೆ, ಸಾರ್ಥಕತೆಯ ಬಗೆಗೆ ಮಾತಾಡುವುದು ಹಾಸ್ಯಾಸ್ಪದವಾಗುತ್ತದೆ. ಆದರೆ ವಾಸ್ತವದ ಕಣ್ಣಿನಿಂದ, ಜೀವನದ ಬಾವಿಯೊಳಗೆ ಇಣುಕಿದಾಗ ಸುಳ್ಳು , ತಮ ಎಂಬಿತ್ಯಾದಿಗಳು ಗಟ್ಟಿ ಬಂಡೆಯ ಮೇಲಿನ ಕೇವಲ ಮೇಲಿನ ತೆಳು ಮಣ್ಣಷ್ಟೆ . ಇದು ಕೊನೆಯೇ ಇಲ್ಲದ ಸಮುದ್ರ ಎನಿಸಿದರೂ ಅದರಾಚೆಗೂ ಸತ್ಯದ ದಡ ಇದ್ದೇ ಇದೆ ಎನ್ನುವುದು ಸಿಹಿ ವಾಸ್ತವ!