ಅವರ ಪ್ರಕಾರ
ಪ್ರೀತಿಯೆಂದರೆ
ಒಂದು ನದಿ,
ಹತ್ತಾರು ಮುಗ್ಧ
ಜೊಂಡುಗಳನ್ನು
ಮುಳುಗಿಸುತ್ತಾ
ಸಾಗುವ ತೊರೆ!
ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!
ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು ನೀನೆ
ಅದರ ತಾಯಿ ಬೇರು!
ಪ್ರೀತಿಯೆಂದರೆ
ಒಂದು ನದಿ,
ಹತ್ತಾರು ಮುಗ್ಧ
ಜೊಂಡುಗಳನ್ನು
ಮುಳುಗಿಸುತ್ತಾ
ಸಾಗುವ ತೊರೆ!
ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!
ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು ನೀನೆ
ಅದರ ತಾಯಿ ಬೇರು!
7 comments:
ನಿಮ್ಮ ಕವನದಲ್ಲಿ ನಿಮ್ಮ ಭಾವನೆಗಳಿಗೆ ತುಂಬಾ ಪ್ರಾಮುಖ್ಯತೆ ನೀಡಿದ್ದಿರಾ ಅನಿಸುತ್ತೆ...
ಆದರೂ ಸಹ ತುಂಬ ಚೆನ್ನಾಗಿ ವ್ಯಕ್ತಪಡಿಸಿದ್ದಿರಾ......
ನಿಮ್ಮ ಪ್ರೀತಿಯ ಪರಿಕಲ್ಪನೆ ಚೆನ್ನಾಗಿದೆ. ಪ್ರೀತಿ ಒಬ್ಬೊಬ್ಬರ ಪಾಲಿಗೆ ಒಂದೊಂದು ಥರ. ಅದಕ್ಕೆ exact definition ಕೊಟ್ಟು ಉದ್ಧಾರಾದವರು ಯಾರಿದ್ದಾರೆ ಹೇಳಿ? ನನ್ನ ಪಾಲಿಗೆ ಪ್ರೀತಿ ಎಂದರೆ ನದಿ.
Awesome Lines..
Superb holike...
nimma hudugi, anavaratha , aliyada, hoovugala aralasali endu haaraisuva,
Let..me..
Superb lines
ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು ನೀನೆ
ಅದರ ತಾಯಿ ಬೇರು!
ನಾನೀಗ ನನ್ನ ಪ್ರೀತಿಯ ಹೂವಿಗೆ ತಾಯಿ ಬೇರು ಹುಡುಕುತ್ತಾ ಇದ್ದೇನೆ
koneya salu tuMba hiDasitu...teletuMba adarade yochne.....:P
ತುಂಬಾ ಚೆನ್ನಾಗಿದೆ..ಕೊನೆಯ ೨ ಸಾಲು ಅಂತೂ ಬಹಳ ಚಂದ ಇದೆ.
@ samanvyaya
ಧನ್ಯವಾದಗಳು..
ಭಾವಜೀವಿ ಅಂದ ಮೇಲೆ, ಭಾವನೆಗಳೆ ಅಲ್ಲೆವೆ ಪ್ರಧಾನವಾಗುವುದು!
ಭಾವನೆಗಳೆ ಅಲ್ಲವೆ ಮನಸ್ಸಿನ ಎಲ್ಲಾ ಕಾಯಕಕ್ಕೂ ಬೀಜವಾಗುವುದು..!
@ let me feel
ಬಹಳ ಸಂತೋಷವಾಯಿತು ನಿಮ್ಮ ಅಭಿಪ್ರಾಯ ಮತ್ತು ಹಾರೈಕೆಯನ್ನು ಓದಿ..!
@ ವಿಜೇಂದ್ರ ರಾವ್
ಋಣಿ ನಿಮ್ಮ ಕಮೆಂಟುಗಳಿಗೆ..
ಆಶಾವಾದಿಯಾಗಿರಿ.. ಸಿಕ್ಕೆ ಸಿಗುತ್ತಾಳೆ, ನಿಮ್ಮ ಹೂವಿನ ಹುಡುಗಿ! ;)
@ mahanetsh
ಆ ಸಾಲುಗಳು ನಿಮಗಿಷ್ಟವಾದದ್ದು ತಿಳಿದು ಸಂತೋಷವಾಯಿತು.. ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ..
ಅವು ನಿಮ್ಮನ್ನು ಯೋಚನೆ ಹಚ್ಚಿದ್ದು ಈ ಕವನ ಎಂದಾದರೆ ಅದರ ಹುಟ್ಟು ಸಾರ್ಥಕವಾಯಿತು ಬಿಡಿ!!
ಹೀಗೆ ಓದುತ್ತಾ ಇರಿ..!!
ಹಾಗು
@ ಮನಸ್ವಿನಿ
ಧನ್ಯವಾದಗಳು....
ಕೊನೆಗೂ ನೀನು ಆಶಿಸಿದ ಸಾಲು ನನ್ನ ಬ್ಲಾಗು ಕಾಣಿಸಿಕೊಂಡಿತೆ..!!
ಬರಿ ವಿರಹ ಗೀತೆಗಳನ್ನು ಮಾತ್ರ ಬರೆಯಬೇಡ ಅಂತಾ ಹೇಳ್ತಿದ್ದೀಯಲ್ಲ...!! ಅದಕ್ಕೆ ಉತ್ತರವಿರಬಹುದೇ ಇದು!?
Post a Comment