Tuesday, August 5, 2008

ಎರಡೆ ಎರಡು ಹನಿಗಳು..

ಉತ್ತರ

ದೀಪಗಳಿರುವುದು
ಉರಿಯಲೆ ಅಥವ ಉರಿಸಲೆ?
ಉತ್ತರ ಹುಡುಕ ಹೋದ
ಎಷ್ಟೋ ಹುಳಗಳು ಕರಕಲಾದವು

*~*~*

ಸಿಗದ ಲೆಕ್ಕ

ಬದುಕಿನ ಗಣಿತದಲ್ಲಿ,ಕೂಡಿದ್ದು ಎಲ್ಲಿ ಉಳಿದೀತು?
ಕಳೆದ ಕ್ಷಣಗಳಂತೂ ನೆನಪಿನ ಖಾತೆಗೆ ಜಮಾ;
ತಾಳೆಯಾದೀತೆಂದು ತಾಳ್ಮೆಯಿಂದ ಕಾದರೂ
ಕೊನೆಗೆ ಉಳಿವುದು ಸಾವೆಂಬ ಸೊನ್ನೆಯೆ!

9 comments:

Pramod P T said...

'ಉತ್ತರ' ತುಂಬಾ ಚೆನ್ನಾಗಿದೆ ಶಂಕರ್

Anonymous said...

ಬಹಳ ದಿನಗಳ ಮೇಲೆ ಒಂದೊಳ್ಳೆಯ ಕವಿತೆ ನೀಡಿದ್ದೀರಿ. ಧನ್ಯವಾದ.

ಜಿತೇಂದ್ರ

Unknown said...

ಪ್ರಶ್ನೆಗೆ ತುಂಬಾ ಚೆನ್ನಾಗಿ 'ಉತ್ತರ' ನೀದಿದ್ದಿರಿ.

-Raghu

ಭಾವಜೀವಿ... said...

ಪ್ರಮೋದ್,
:) ನಾನು ಬರೆದಿದ್ದನ್ನು ಸದಾ ಓದಿ ಕಮೆಂಟಿಸುವ ನಿಮ್ಮ ಔದಾರ್ಯಕ್ಕೆ ನಾನು ಋಣಿ!

ಜಿತೇಂದ್ರ,
ಇದೆ ಮೊದಲು ಇರಬೇಕು ನೀವು ಓದಿ ಕಮೆಂಟಿಸಿದ್ದು? ಖುಶಿಯಾಯ್ತು ನನ್ನ ಕವಿತೆ ನಿಮಗೆ ಇಷ್ಟವಾಗಿದ್ದಕ್ಕೆ!

ರಾಘು..
ಧನ್ಯವಾದಗಳು...!!
ತಮ್ಮ ಪರಿಚಯವಾಗಲಿಲ್ಲ!

ಮನಸ್ವಿನಿ said...

ಎರಡೂ ಹನಿಗಳು ಚೆನ್ನಾಗಿವೆ. ಬರೀತಾ ಇರು.

VENU VINOD said...

modala hani tumba chennagittu, haagu arthapoorna...

shivu.k said...

ಎರಡು ಒಳ್ಳೆಯ ಕವನಗಳು ಚಿಕ್ಕವಾದರೂ ಮನದಲ್ಲಿ ಕಾಡುತ್ತವೆ.

ಕೊನೆಗೆ ಸತ್ಯವೆನಿಸುತ್ತವೆ.

ವಿನುತ said...

ಸಾವೆಂಬುದು ಸೊನ್ನೆಯಾದರೂ ಬದುಕೆಂಬ ಒಂದನ್ನು ಎಲ್ಲಿ ಸೇರಿಸುತ್ತೀರಿ ಎನ್ನುವುದರ ಮೇಲೆ ಲೆಕ್ಕ ಸಿಕ್ಕೀತು :)

Guruprasad . Sringeri said...

ಚಿಕ್ಕದಾಗಿ ಚೊಕ್ಕದಾಗಿ ಬರೆದಿದ್ದೀರಿ ಸಾರ್., ತುಂಬಾ ಇಷ್ಟವಾಯಿತು.