Tuesday, August 19, 2008

ಹೆಸರಿನ ಹಂಗಿಲ್ಲದ ಹನಿಗಳು..

ಸತ್ತು ಸುಧಾರಿಸಿಕೊಳ್ಳುತ್ತಿದ್ದವನ
ಗೋರಿಯ ಮೇಲೆ
ನೀ ಬಂದು ಕೂತಾಗ
ತಲೆಗೆ ಕಲ್ಲು ಬಡಿದಂತಾಗಿ
ಬೆಚ್ಚಿ ಬಿದ್ದು ಎದ್ದು ಕುಳಿತೆ
ಇನ್ನೆಲ್ಲಿಯ ನಿದ್ರೆ!

*~*~*~*

ಕಾಲನ ಕಲ್ಲುಗಳ ಮೇಲೆ ಕೆತ್ತಿದ
ಕವಿತೆ ನಿನ್ನ ನೆನಪುಗಳು;
ಮಾಯಲು ಅವೇನು ಗಾಯಗಳೆ?
ಕೊನರುವುದಿಲ್ಲ, ಕರಗುವುದಿಲ್ಲ
ಬಿರುಗಾಳಿಗೆ ನಲುಗುವುದೂ ಇಲ್ಲ.
ಕೇವಲ ಹಸಿರಾಗುತ್ತವೆ
ಕಣ್ಣೀರ ಮಳೆಗೆ ಪಾಚಿ ಕಟ್ಟಿದಾಗ!

*~*~*~*

ಕತ್ತಲಿನಂತೆ
ಬೆಳಕಿಗೂ
ನೆರಳಿರುವುದಿಲ್ಲ!

20 comments:

ಜಿತೇಂದ್ರ said...

ನಿಜಕ್ಕೂ ನೀವೊಬ್ಬ ‘ಭಾವಜೀವಿ’. ಹೆಚ್ಚಿಗೆ ಹೇಳಿದರೆ ಅರ್ಥ ಕೆಟ್ಟೀತು! ಮನದಾಳಕ್ಕಿಳಿವ ಕವಿತೆ.
-ಜಿತೇಂದ್ರ

raghu said...

2nd one tumbaaa ishta aythu
-Raghu

ಕುಕೂಊ.. said...

ನಿಮ್ಮ ಎರಡನೆಯ ಕವಿತೆ ತುಂಬಾ ಆಳವಾದ ಭಾವವನ್ನು ಬಿಂಬಿಸುತ್ತುದೆ. ನನಗೆ ತುಂಬಾ ಇಷ್ಟವಾಯಿತು.
ಸ್ವಾಮಿ

Vish said...

sakathagide kaniri

ಮನಸ್ವಿನಿ said...

ಬಹಳ ಚಂದವಿವೆ ಹನಿಗಳು. ಬೇಗ ಬೇಗ ಅಪ್ಡೇಟ್ ಮಾಡ್ತ ಇದ್ದಿಯಾ...ಸಂತೋಷ :)

ಯಜ್ಞೇಶ್ (yajnesh) said...

Tumba chennagi bandide.

Last one ista aytu

dinesh said...

simply Superb.....

ನವಿಲುಗರಿ said...

ಒಂದಕ್ಕಿಂತ ಒಂದು ಚಂದ ಇದೆ..:)

shivu K said...

ಕತ್ತಲಿಗಿರುವಂತೆ
ಬೆಳಕಿಗೂ ನೆರಳಿರುವುದಿಲ್ಲ.
ನನಗೆ ಇಷ್ಟವಾದ ಸಾಲುಗಳು. ತುಂಬಾ ಅರ್ಥಕೊಡುವಂತದು.
ನಿಮ್ಮ ಉಳಿದ ಕವನಗಳಲ್ಲಿ ಭಾವನಾತ್ಮಕ ಅಭಿವ್ಯಕ್ತಿ ಸುಂದರವಾಗಿದೆ. ಹೀಗೆ ಬರೆಯುತ್ತಿರಿ.....
ನನ್ನ ಬ್ಲಾಗಿಗೊಮ್ಮೆ ಬನ್ನಿ.

Lakshmi S said...

mooraneya hani hRudayakke naaTuttade.

Anonymous said...

ಚಂದನೆಯ ಭಾವಗಳುಳ್ಳ ಬ್ಲಾಗು. ಇಷ್ಟು ದಿನ ನಂಗೆ ಹೇಗೆ ಮಿಸ್ ಆಯಿತು?

ಕೊನೆಯ ಹನಿ ಸೂಪರ್‍.

ಸುಪ್ತದೀಪ್ತಿ suptadeepti said...

ಹನಿಗಳು honeyಯಂತೆಯೇ ಇನಿದು, ಸವಿ ಸವಿ.

ಮತ್ತೆ ಕಾಣೆಯಾಗಿದ್ದೀರಿ? ಭಾವಯಾನಕ್ಕೆ ಹೋಗಿದ್ದೀರೋ ಹೇಗೆ?

vinutha said...

ಕಾಲನ ಕಲ್ಲುಗಳ ಮೇಲಿನ ನೆನಪುಗಳು ಕೊನರುವುದಿಲ್ಲ, ನಲುಗುವುದಿಲ್ಲ, ಕರಗುವುದಿಲ್ಲ. ಆದರೆ ಬಿರುಗಾಳಿ ಮಳೆಗೆ, ಸವೆಯುತ್ತವೆ, ಮಾಸುತ್ತವೆ. ಏನಂತೀರಿ? :)

ಧರಿತ್ರಿ said...

ಭಾವಜೀವಿ ನಮಸ್ಕಾರ.. ನಾನು ಧರಿತ್ರಿ. ಯುವಕವಿಯಿಂದ ಇಲ್ಲಿಗೆ ಓಡೋಡಿ ಬಂದೆ. ನಿಮ್ಮ 'ಭಾವ ಹನಿ'ಗಳನ್ನು ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಿ. ಶುಭವಾಗಲಿ.
-ಧರಿತ್ರಿ
(http://www.dharithrick.blogspot.com/)

ಜಲನಯನ said...

ಭಾವನಾ ಜೀವಿ
ಭಾ-ವನ ಜೀವಿ
ನಿಜಕ್ಕೂ...ಕತ್ತಲಿಗೆ ಭಾವನೆ ಬಂದರೆ ಬೆಳಕಿಗೆ ನೆರಳು ಕಂಡೀತು
ಬೆಳಕು - ಪ್ರತಿಫಲಿತ ನೆರಳು ಸಾಧ್ಯ
ಬಹಳ ಆಳಕೆ ಇಳಿದು ಭಾವನೆಗಳ ಮಂಥನ
ಭಾವನಾ ಜೀವಿಗೆ
ಭಾಜೀಯೇ ಸಾಟಿ...

Manjunatha Kollegala said...

I wonder how I missed your blog all these days. ಇಂದು ನನ್ನ ಬ್ಲಾಗಿನಲ್ಲಿ ನಿಮ್ಮ ಕಾಮೆಂಟಿನ ಜಾಡು ಹಿಡಿದು ಇಲ್ಲಿ ಬಂದು ಮುಟ್ಟಿದೆ. ಹೆಸರಿನ ಹಂಗಿಲ್ಲದ ಹನಿಗಳು, ನಿಜಕ್ಕೂ ತಮ್ಮ ’ಹನಿ’ತನದಿಂದಲೇ ಹಿಡಿದಿಡುತ್ತವೆ. ಮೂರೂ ಹನಿಗಳು ತುಂಬ ಇಷ್ಟವಾದುವು.

ಸಾಗರದಾಚೆಯ ಇಂಚರ said...

shankar,
ಎಷ್ಟು ದಿನದ ನಂತರ ನಿಮ್ಮ ಬ್ಲಾಗ್ ನೋಡಿದೆ
ಬಹಳ ಖುಷಿ ಆಯಿತು
ಒಳ್ಳೆಯ ಕವನ

Machikoppa said...

ನಮಸ್ಕಾರ.
ನೀವು ನನ್ನ ಬ್ಲಾಗನ್ನು ಓದಿ ಕಾಮೆಂಟ್ ಬರದಿದ್ದು ಖುಷಿಯಾಯಿತು.ನಾವಿನ್ನೂ ಬ್ಲಾಗ್ ಲೋಕದಲ್ಲಿ ಕಣ್ಣು ಬಿದುತ್ತಿರುವವರು.
ನೀವು ಹೇಳಿದ ಆ ಕಥೆ (ಲಂಗೋಟಿ) ಚನ್ನಾಗಿದೆ.ಅದೇ ರೀತಿ ಲಂಗೋಟಿ ಬೇಲಿ ಗೂಟಕ್ಕೆ ಸಿಕ್ಕಿ ಬಿಚ್ಚಿಹೋದ ಕಥೆ ಕೇಳಿದ್ದೇನೆ.ಅದನ್ನು ಮುಂದೊಮ್ಮೆ ಬ್ಲಾಗಲ್ಲಿ ಬರಿತಿನಿ.
ನಿಮ್ಮ ಊರು ಶೃಂಗೇರಿ ಪಕ್ಕ ಎಲ್ಲಿ? ನಮ್ದು ಕೊಪ್ಪಾ ತಾಲೂಕ್ ಮಾಚಿಕೊಪ್ಪ ಅಂತ.

ಶಿವಶಂಕರ ವಿಷ್ಣು ಯಳವತ್ತಿ said...

tumba chanda idave nimma ಹೆಸರಿನ ಹಂಗಿಲ್ಲದ ಹನಿಗಳು

but bareyodu nillisi bahala dina aada haagide. yaavude blog nillabaradu..

inti,

www.shivagadag.blogspot.com

ಗುರುಪ್ರಸಾದ್, ಶೃಂಗೇರಿ. said...

ಎರಡನೇದು ತುಂಬಾ ಇಷ್ಟವಾಯಿತು :)