Sunday, June 29, 2008

ಅಹಲ್ಯೆಯ ಸ್ವಗತ


ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ್ನೆದೆಯನ್ನು ಸುಡುತ್ತವೆ
ಆಗೆಲ್ಲಾ ವ್ಯರ್ಥವಾಗುತ್ತಿದ್ದ
ಕಣ್ಣೀರಿನ ಹನಿಗಳೆ ಈಗ
ಬೆಂಕಿಯಾರಿಸಿ ಕತ್ತಲಾಗಿಸುತ್ತವೆ
ಕೆಂಡ ಸುಂಯ್ಯ್‍ ಎನ್ನುತ್ತಾ
ಇದ್ದಿಲಾಗುತ್ತದೆ
ನಾನು ಕೂತಲ್ಲೆ
ತಣ್ಣಗಾಗುತ್ತೇನೆ,
ಮಂಜುಗಡ್ಡೆಯ
ಕಲ್ಲಾಗುತ್ತೇನೆ
ಕೊನರುವ ಆಸೆಯೊಂದಿಗೆ
ಕೊರಡಾಗುತ್ತೇನೆ
ಬೆಳಕ ಹರಡುವ ಸೂರ್ಯ
ಸುಡತೊಡಗುತ್ತಾನೆ

{ಬಿನ್ನಹ: ನನ್ನ ಬ್ಲಾಗ್ ಅಪ್ಡೇಟ್ ಆಗದೆ ಬಹಳ ದಿನಗಳು ಎನ್ನುವುದಕ್ಕಿಂತ, ಬಹಳ ತಿಂಗಳುಗಳೆ ಕಳೆದಿದ್ದವು.! ಇದಕ್ಕಾಗಿ ಕಾದು, ನಿರಾಶರಾದ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತಿದ್ದೇನೆ. ಯಾಕೆ ಬರೆಯಲಿಲ್ಲ, ಎಲ್ಲಿ ಹೋಗಿದ್ದೆ ಈ ಎಲ್ಲವಕ್ಕೂ ಕಾರಣ, ಸಮಜಾಯಿಶಿಗಳು ಇಲ್ಲಿ ಅಪ್ರಸ್ತುತ. ಬರೆಯದೆ ಕೂತಿದ್ದ ನನ್ನನ್ನು ಹಾಗು ನನ್ನ ಮನಸ್ಸಾಕ್ಷಿಯನ್ನು ಪ್ರೇರೇಪಿಸಿ ಮತ್ತೆ ಬರೆಯಲು ಆರಂಭಿಸುವಂತೆ ಮಾಡಿದ ಎಲ್ಲ ಸಹ ಬ್ಲಾಗಿಗಳು ಹಾಗು ಸ್ನೇಹಿತರಿಗೂ ನಾನು ಋಣಿ. ಅಪರಾಧವಂತೂ ಆಗಿದೆ, ಈ ನನ್ನ ತಪ್ಪಿಗೆ ನಿಮ್ಮಲ್ಲಿ ಮತ್ತೊಮ್ಮೆ ಕ್ಷಮೆ ಕೋರುತ್ತಾ ಮತ್ತೆ ಬ್ಲಾಗಿಸುತ್ತಿದ್ದೇನೆ.. ಅಂದ ಹಾಗೆ ನಿಮ್ಮ ಯಾವ ಶಿಕ್ಷೆಗೂ ನಾನು ರೆಡಿ!! ನಿಮ್ಮ ಶಿಕ್ಷೆಯೆ ನನಗೆ ಶ್ರೀರಕ್ಷೆ!!;)}

10 comments:

Sree said...

ಅದ್ಭುತವಾಗಿದೆ!!
"ಕೊನರುವ ಆಸೆಯೊಂದಿಗೆ
ಕೊರಡಾಗುತ್ತೇನೆ"...ತುಂಬಾ ಚೆನ್ನಾಗಿದೆ...welcome back:) ಶಿಕ್ಷೆ - ಬೇಗ ಬೇಗ ಇನ್ನಷ್ಟು ಬರೀರಿ:)

ಮನಸ್ವಿನಿ said...

ಚಂದ ಇದೆ. ಇಷ್ಟವಾಯ್ತು ಕಣೋ

ಶಿಕ್ಷೆ ಬಗ್ಗೆ ನೀನು ಮಾತಾಡದೆ ಇದ್ರೇನೆ ಒಳ್ಳೆದು. :)

ಭಾವಜೀವಿ... said...

ಶ್ರೀ,
:) ನಿಮ್ಮ ಈ ಶಿಕ್ಷೆಯನ್ನು ತಲೆಯೊಡ್ಡಲಾಗಿದೆ!!

ಮನಸ್ವಿನಿ!!
ಅಯ್ಯೋ, ಇಷ್ಟು ದೊಡ್ಡ ಶಿಕ್ಷೆ ಕೊಡ್ತಾ ಇದೀಯಾ!!!

Anonymous said...

Ree,

Nimmella chutukugalanna onde gukkige odi mugusi, adakke sapndisiruvavara ella maatu galannoo oodi muguside.

Eshtu adbhutavaagi bareetira! abba!

innomme kootu nidhanavaagi ellavannoo odabeku. Odta idre haage kaledu hogtini.

Tumba chennagide.

Sowmya

ಭಾವಜೀವಿ... said...

ಅನಾನಿಮಸ್‌ ಅಥವಾ ಸೌಮ್ಯ!
ನನ್ನ ಬ್ಲಾಗಿನೊಳಗೆ ಸ್ವಾಗತ!!
ನನ್ನ ಬರಹಗಳು ನಿಮಗೆ ಇಷ್ಟವಾಗಿದ್ದು ತಿಳಿದು ಸಂತಸವಾಯಿತು! ನಿಮ್ಮ ಇಂತಹ ಕಮೆಂಟುಗಳೆ ನನಗೆ ಬರೆಯುತ್ತಿರಲೇ ಬೇಕು ಎಂದು ಪ್ರೇರೇಪಿಸುತ್ತದೆ!ಇನ್ನೊಮ್ಮೆ ಸಾವಕಾಶವಾಗಿ ಖಂಡಿತಾ ಎಲ್ಲವನ್ನೂ ಓದಿ ಆದರೆ ಎಲ್ಲೂ ಕಳೆದು ಹೋಗದೆ, ಇಲ್ಲಿಗೆ ಮರಳಿ ಬನ್ನಿ ಇನ್ನಷ್ಟು ಸಂಜೆಯ ರಾಗವನ್ನು ಕೇಳಿಸುತ್ತೇನೆ! :)

dinesh said...

ಕವನ ತುಂಬಾ ಚೆನ್ನಾಗಿದೆ.....

ಭಾವಜೀವಿ... said...

Dinesh,
ಧನ್ಯವಾದ ರೀ, ಕವನ ಮೆಚ್ಚಿಕೊಂಡಿದ್ದಕ್ಕೆ!! ಅಂದ ಹಾಗೆ ತಮಗೆ ಲೋಕಲೈಸೇಶನ್‌ನಲ್ಲಿ ಆಸಕ್ತಿ ಇದೆ ಎಂದು ತಿಳಿದು ಸಂತಸವಾಯ್ತು. ನಾನೂ ನಿಮ್ಮ ಬಳಗಕ್ಕೆ ಸೇರಿದವನು. ಯಾವುದಾದರೂ ಲೋಕಲಸೇಶನ್‌ ಪ್ರಾಜೆಕ್ಟಿನಲ್ಲಿ (ಓಪನ್‌ ಸೋರ್ಸ್ ಪ್ರಾಜೆಕ್ಟುಗಳು) ಕೆಲಸ ಮಾಡಿದ್ರಾ!? ಈಗಲೂ ಮಾಡುವ ಇಚ್ಚೆ ಇದೆಯಾ? ನನಗೆ ಬರೆಯಿರಿ (prasad(dot)mvs(at)gmail(dot)com

ಯಜ್ಞೇಶ್ (yajnesh) said...

ಕವನ ಸುಂದರವಾಗಿದೆ

Pramod P T said...

ಕವನ ಮತ್ತು ಚಿತ್ರ ಎರಡೂ ಸೊಗಸಾಗಿದೆ.

sunaath said...

ಭಾವಜೀವಿ,
ಅಹಲ್ಯೆ ಕೊನರಲಿಲ್ಲ. ಆದರೆ ನೀವು ಕೊನರಿದಿರಲ್ಲ,ಸಾಕು.