Friday, November 30, 2007

ಹೆಸರಿಲ್ಲದ ಹನಿಗಳು

ಜಗದಂಗಳದ ಜಂಗುಳಿಯಲ್ಲಿ
ಅವನಿಗಾಗಿ ಹುಡುಕಿದೆ,
ಎಲ್ಲರ ಮುಖದಲ್ಲೂ ಕನ್ನಡಿ;
ಕಂಡದ್ದು ನನ್ನದೆ ಮಸುಕು ಬಿಂಬ

~*~*~*~*~

ನಿದ್ದೆ ಬಾರದ ರಾತ್ರಿಯಲಿ
ಮನದ ಸೂರ ತುಂಬೆಲ್ಲಾ
ಧಗಧಗಿಸುವ ನಿನ್ನ ನೆನಪ
ಮಳೆ ನಕ್ಷತ್ರಗಳು...!

~*~*~*~*~

ನೀನು ಸಿಗಲಿಲ್ಲವೆಂದು
ಬೇಸರಿಸಿದೆ, ದುಃಖಿಸಿದೆ,
ನಿನ್ನ ನೆನಪಲ್ಲೇ ಬದುಕಿದೆ!
ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!

25 comments:

Pramod P T said...

ಶಂಕರ್,
ಉದ್ದೇಶಪೂರ್ವಕವಾಗಿ ಹೆಸರಿಡುವ ಪ್ರಯತ್ನ ಮಾಡಿಲ್ಲವೋ ಹೇಗೆ?
ಎಲ್ಲಾ ಹನಿಗಳು ಚೆನ್ನಾಗಿವೆ.

ಭಾವಜೀವಿ... said...

ಪ್ರಮೋದ್,
ಇಷ್ಟು ದಿನಗಳ ನಂತರ ನನ್ನ ಬ್ಲಾಗ್ ಅಪ್ಡೇಟ್ ಮಾಡಿದ್ರೂ, ಓದಿ ಕಮೆಂಟಿಸಿದ ನಿಮ್ಮ ಪ್ರೀತಿಗೆ ಎರಡು ಮಾತಿಲ್ಲ..!!
ಮೂಗಿಗಿಂತ ಮೂಗುತಿ ಭಾರವಾಗಬಾರದಲ್ಲ ಅಂತಾ ಹೆಸರಿಟ್ಟಿಲ್ಲ!!

VENU VINOD said...

ಎಲ್ಲ ಸಾಲುಗಳೂ ಸುಂದರ ಅದರಲ್ಲೂ

ಎಲ್ಲರ ಮುಖದಲ್ಲೂ ಕನ್ನಡಿ;
ಕಂಡದ್ದು ನನ್ನದೆ ಮಸುಕು ಬಿಂಬ..
ಈ ಸಾಲಂತೂ ಸೂಪರ್‍

ರಂಜನಾ ಹೆಗ್ಡೆ said...

ಶಂಕರ್,
ಎನು ಇಷ್ಟು ದಿನಾ ಆದ ಮೇಲೆ ಬ್ಲಾಗ್ ಅಪ್ ಡೆಟ್ ಮಾಡಿದ್ದಿರಾ? ಎಲ್ಲಿಗೆ ಹೋಗಿ ಬಿಟ್ಟಿದ್ರಿ?
ಹನಿಗಳು ತುಂಬಾ ಚನ್ನಾಗಿ ಇವೆ.

Seema said...

"...... ಬದುಕಿದೆ.
ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!"

ಉಫ್...
ತುಂಬಾ........... ಚೆನ್ನಾಗಿದೆ.
ಹೀಗೂ ಯೋಚಿಸಬಹುದಲ್ಲ ಎನಿಸಿತು.

ಭಾವಜೀವಿ... said...

ವೇಣು,
ಖುಶಿಯಾಯ್ತು ನೀವು ನನ್ನ ಸಾಲುಗಳನ್ನು ಓದಿ ಇಷ್ಟ ಪಟ್ಟಿದ್ದಕ್ಕೆ!

ರಂಜನಾ,
ಹೌದು ತುಂಬಾ ದಿನಾ ಆಗಿತ್ತು, ನನ್ನ ಬ್ಲಾಗ್ ಗಿಡದಲ್ಲಿ ಹೂ ಬಿಡದೆ! ತಮ್ಮಂತವರ ಆಗ್ರಹಕ್ಕೆ ಮಣಿದು ಅಜ್ಞಾತದಿಂದು ಹೊರಬಂದು ಶಾಪ ವಿಮುಖ್ತನಾದೆ!! ;) ಇನ್ನೂ ನನ್ನನ್ನು ನನ್ನ ಬ್ಲಾಗ್ ಸಸಿಯನ್ನೂ ಮರೆಯದೆ, ಅಷ್ಟು ಶೀಘ್ರವಾಗಿ ಓದಿ ಕಮೆಂಟಿಸಿದ್ದಕ್ಕೆ ನಾನು ಆಭಾರಿ.. ಇನ್ನು ಮುಂದೆ ಯಾವುದೆ ಕಾರಣವನ್ನೀಯುವುದಿಲ್ಲ ಎಂದು ಭರವಸೆ ಕೊಡುತ್ತೇನೆ!

ಸೀಮಾ,
ಆ ಸಾಲು ನನ್ನ ಮನಸ್ಸಿನ ನಿಲುವಿಗೆ ದಕ್ಕಿದಾಗ ನನಗೂ ನಿಮ್ಮಷ್ಟೇ ಖುಶಿಯಾಗಿತ್ತು!
ನನ್ನನ್ನು ನೆನಪಿಟ್ಟುಕೊಂಡು, ಬ್ಲಾಗ್ ಅಪ್ಡೇಟ್ ಆಗ್ತಾ ಇದ್ದ ಹಾಗೆ ಓದಿ ಅಭಿಪ್ರಾಯ ತಿಳಿಸುವಷ್ಟು ವಿಶ್ವಾಸ ಇರಿಸಿದ್ದಕ್ಕೆ ಋಣಿ!

ಸಿಂಧು Sindhu said...

ಶಂಕರ್,

ಖುಷಿ ನೀವು ಕೊನೆಗೂ ಪೋಸ್ಟ್ ಮಾಡುವ ದಯ ತೋರಿದ್ರಲ್ಲಾ ಅಂತ.

ತುಂಬ ಹಿತವಾದ ಹನಿಗಳು. ಚೆನಾಆಆಆಆಗಿವೆ.
ಕಂಡ ಮಸುಕು ಬಿಂಬ ಕಾಣದ ಹಲವು ನೋಟಗಳನ್ನು ಕಟ್ಟಿಕೊಡುತ್ತದೆ.

ಇನ್ನೊಂದು ನೆನಪು ಮಾಡಲಾ.. ನೀನು ಓರೆನೋಟ ನೋಡಿದ್ದಕ್ಕೇ ಹೈರಾಣಾಗಿದ್ದೇನೆ. ಇನ್ನು ನೇರ ನೋಡಿದ್ದರೆ ನನ್ನ ಹೃದಯ ನಿಂತು ಹೋಗುತ್ತಿತ್ತು.. ನೀನು ಒಳ್ಳೆಯವಳು ಮಾರಾಯ್ತೀ ಅಂದಿದ್ರು ನಮ್ ಉರ್ದು ಕವಿಗಳು..

ಪ್ರೀತಿಯಿಂದ
ಸಿಂಧು

ಮನಸ್ವಿನಿ said...

ಎಲ್ಲಾ ಹನಿಗಳು ಚೆನ್ನಾಗಿವೆ.
ಕೊನೆಯ ಹನಿಯ ಕೊನೆಯ ಸಾಲು ಓದಿ ಸತ್ತೇ ಹೋಗಿದ್ದೇನೆ :)

raghu said...

ಎಷ್ಟು ಚೆನ್ನಾಗಿ ಬರೆದಿದ್ದೀರಾ!! ಕೊನೆಯ ಸಾಲು ಸೂಪರ್ ...
ಧನ್ಯವಾದಗಳು..

ಶಾಂತಲಾ ಭಂಡಿ said...

ಭಾವಜೀವಿ...
ಏನೋ ಹೇಳೋಣವೆಂದು ಬಂದರೆ ಎಲ್ಲರೂ ಅದನ್ನೇ ಹೇಳಿಬಿಟ್ಟಿದ್ದಾರೆ, ನಾನೂ ಅದನ್ನೇ ಹೇಳುವುದು, "ಕೊನೆಯ ಸಾಲುಗಳು ಚೆನ್ನಾಗಿವೆ." ಓದಿ ಉಸಿರು ಹಿಡಿದುಕೊಂಡ ಅನುಭವ.

ನಾವಡ said...

ಸಾಲುಗಳು ಚೆನ್ನಾಗಿವೆ.
ಅಸಂಬಂದ್ಧ ಸಾಲುಗಳು ಬದ್ದವಾಗಿವೆ.
ನಾವಡ

BANADI (The Skylark) said...

ಉರ್ದುವಿನ ಶಾಯಿರಿ ನೆನಪಿಸುವ ಸಾಲುಗಳು ಅಪೂರ್ವವಾಗಿವೆ.
ವ್ಹಾ ... ವ್ಹಾ... ಏನು ಸೊಗಸಿದೆ.

ಒಲವಿನಿಂದ
ಬಾನಾಡಿ

ತೇಜಸ್ವಿನಿ ಹೆಗಡೆ said...

ಹನಿಗಳು ಹನಿ ಹನಿಯಾಗಿ ಮನ ಮುಟ್ಟುವಂತಿವೆ. ಕೊನೆಯ ಹನಿ ತುಂಬಾ ಚೆನ್ನಾಗಿದೆ.

jomon said...

ನಮಸ್ತೆ,

ನಿಮ್ಮ ಬ್ಲಾಗ್ ಸೊಗಸಾಗಿದೆ. ಜೊತಗೆ ಈ ಬಾರಿಯ ಹನಿಗಳು..ಎಲ್ಲವೂ ಸಂಜೆಯ ರಾಗಕ್ಕೆ ಒಪ್ಪುವಂತೆ, ಮುಗಿಲಿಗೆ ಕಟ್ಟಿದ ತೋರಣದಂತೆ. ಬರೆಯುತ್ತಲಿರಿ.

ಧನ್ಯವಾದಗಳು.
ಜೋಮನ್.

ಮನಸ್ವಿನಿ said...

ಮುಂದಿನ ಪೋಸ್ಟ್ ಮಾರ್ಚಲ್ಲೇನು? ;)

Shiv said...

>>ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!

ಸೂಪರ್ ಆಗಿದೆ ಸಾಲು

ರಾಧಾಕೃಷ್ಣ ಆನೆಗುಂಡಿ. said...

ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!"

ಮತ್ತೆ ಮತ್ತೆ ಗುಣು ಗುಣಿಸುತ್ತಿದೆ.

'ಸಾವಿನಲ್ಲೂ ಎಂಥಾ ಸುಖವಿದೆಯಲ್ಲ '

ರಾಧಾಕೃಷ್ಣ ಆನೆಗುಂಡಿ

ಸವಿಗನಸು...ಸಿಹಿ ನೆನಪಿಗೂ ಇಲ್ಲಿ ಜಾಗವುಂಟು.. said...

hanigalella sogasagive... bahushaha avakke hesarilladdakke hagive anisutte.....

ಶ್ರೀನಿಧಿ.ಡಿ.ಎಸ್ said...

ನಮಸ್ತೇ ಶಂಕರ್,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

srinivas said...

ಹನಿ ಹನಿ ಕೂಡಿದರೆ
ತುಂಬೀತು ಹಳ್ಳ
ಹೆಸರಿಡದ ಹನಿಗಳು
ಮೈದುಂಬಿತು ಜೊಳ್ಳ

ಬಹಳ ಸುಂದರವಾಗಿದೆ ನಿಮ್ಮ ಮನೆ :)

ಶರಶ್ಚಂದ್ರ ಕಲ್ಮನೆ said...

ಹನಿಗಳು ಚನ್ನಾಗಿವೆ. ಹ್ರುದಯದ ಬಾಗಿಲನ್ನು ತಟ್ಟುತ್ತವೆ. ನಾನು ಬ್ಲಾಗ್ ಲೋಕಕ್ಕೆ ಈಗಷ್ಟೆ ಕಾಲಿಟ್ಟವನು. good work. keep writing

ಪ್ರವೀಣ್ ಮಾವಿನಸರ said...

ನಿಮ್ಮ ಕವನಗಳು ಒಂದಕ್ಕಿಂತ ಇನ್ನೊಂದು ಸುಂದರವಾಗಿವೆ.

Anonymous said...

Registration- Seminar on the ocassion of KSC's 8th year Celebration

On the occasion of 8th year celebration of Kannada saahithya.com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Anonymous said...

Registration- Seminar on the ocassion of KSC's 8th year Celebration

On the occasion of 8th year celebration of Kannada saahithya.com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Manjunatha Kollegala said...

ಎಲ್ಲಿಯಾದರೂ ನೀನು ದಕ್ಕಿದ್ದರೆ?
ಖುಶಿಯಿಂದ ಸತ್ತೇ ಹೋಗುತ್ತಿದ್ದೆ!

ಅರ್ಥಗರ್ಭಿತವಾದ ಸಾಲುಗಳು. ಕನಸಿದ್ದು ದಕ್ಕಿದಮೇಲೆ ಬದುಕಲ್ಲಿ ಉಳಿಯುವುದೇನು? ಅಲ್ಲವೇ?