Wednesday, July 4, 2007

ಒಂದಿಷ್ಟು (ಅಸಂಬದ್ಧ!) ಹನಿಗಳು

ವಿಪರೀತ ಹಸಿವೆಂದು
ಸೂರ್ಯನನ್ನು ನುಂಗಿದೆ,
ತಕ್ಷಣ ಮೂಡಿದ ಚಂದ್ರ
ಕಣ್ಣು ಮಿಟುಕಿಸಿದ!

~*~*~

ಕಳೆದದ್ದು ಸಿಕ್ಕಿತೆಂದು
ಕತ್ತಲಲ್ಲಿ ಕೈ ತಡಕಿದೆ
ಏನೂ ಸಿಗದೆ ಕೈ ತೆಗೆದರೆ
ಕೈಗೆಲ್ಲಾ ಹೊಳೆವ ನಕ್ಷತ್ರಗಳು
ಮೆತ್ತಿಕೊಂಡಿದ್ದವು

~*~*~

ಸಾವನ್ನು ಬೆಂಬತ್ತಿ
ಓಡುತ್ತಿದ್ದ ಅವನು
ಹಿಂದಿನಿಂದ ಬಂದ
ಲಾರಿಯಡಿ ಸಿಕ್ಕಿ
ಅಪ್ಪಚ್ಚಿಯಾಗಿಹೋದ

~*~*~

ನೀನು ನೆನಪಾಗದೆ
ವರುಷಗಳೆ ಸಂದವು
ಆದರೂ ಇನ್ನೂ ನೀನೇಕೆ
ಆಗಾಗ ಬಿಕ್ಕಳಿಸುತ್ತಿರುವೆ..!?

~*~*~

ಕಳೆದ ಕಾಲಗಳ ಪುಸ್ತಕ
ತಿರುವುತ್ತಿದ್ದೆ
ಕೆಲವೆಡೆ ರಕ್ತದಲ್ಲಿ ಬರೆದಿತ್ತು
ಹಲವೆಡೆ ಕಣ್ಣೀರಿಂದ ಅಳಿಸಿ ಹೋಗಿತ್ತು

24 comments:

Shree said...

ಅಸಂಬದ್ಧ ಇಷ್ಟು ಚೆನ್ನಾಗಿರಬಹುದಂತ ಗೊತ್ತಿರಲಿಲ್ಲ... keep it up!

Pramod P T said...

ಶಂಕರ್,
ಚೆನ್ನಾಗಿವೆ. ಆದರೆ ಅಸಂಬದ್ಧ ಯಾಕೆ!?

ಭಾವಜೀವಿ... said...

shree,
ಖುಶಿಯಾಯ್ತು ನಿಮಗ ನನ್ನ ಅಸಂಬದ್ಧ ಪ್ರಲಾಪಗಳು ಇಷ್ಟವಾದದ್ದಕ್ಕೆ.. ಖಂಡಿತಾ keep it up ಮಾಡುತ್ತೇನೆ!! ;)

pramod,
ಧನ್ಯವಾದಗಳು, ಎಂದಿನಂತೆ ಪ್ರೋತ್ಸಾಹಿಸಿದ್ದಕ್ಕೆ.. ಮೊದಲ ಹನಿ ನನ್ನ ಮನಸ್ಸಿನಲ್ಲಿ ಮೂಡಿದ ತಕ್ಷಣ ನನಗೆ ಅನ್ನಿಸಿತು, ಸ್ವಲ್ಪ ಅಸಂಬದ್ಧದಂತಿದ್ದರೂ ಚೆನ್ನಾಗಿದೆ, ಹಲವಾರು ಆಯಾಮಗಳನ್ನು ಹೊಂದಿದೆ ಎನ್ನಿಸಿತು. ಆಗಲೆ ಅಂದುಕೊಂಡೆ ಇದರ ಹೆಸರನ್ನು ಅಸಂಬದ್ಧ ಹನಿಗಳು ಎಂದೇ ಇರಿಸುವೆ ಅಂತ. ಸ್ವಲ್ಪ ವಿಯರ್ಡ್ ಆಗಿದ್ರೆ ಜನಕ್ಕೆ ಒಂಥರಾ ಆಕರ್ಷಣೆ ಇರುತ್ತೆ ಅಲ್ವೆ!!? ;)

ಸಿಂಧು sindhu said...

ಭಾವಜೀವಿ,

ಎಲ್ಲ ಹನಿಗಳೂ ಅಸಂಬದ್ಧವೆಂದು ಕರೆಸಿಕೊಂಡೂ, ಮನಸೆಳೆಯುತ್ತಿವೆ..

ಕೊನೆಯ ಹನಿ ಸೂಪರ್ಬ್..

ನಿಮ್ಮ ನಕ್ಷತ್ರ ಮೆತ್ತಿದ ಕೈ,ಎಲ್ಲ ಭಾವಗಳ ಪುಸ್ತಕದ ಪುಟ ತಿರುಗಿಸುತ್ತಾ ನಮಗೆ ಕೈತುತ್ತಿಡುತ್ತಿರಲಿ ಸದಾ.

ಓಂಶಿವಪ್ರಕಾಶ್ ಎಚ್. ಎಲ್ said...

ಓದಿದ ತಕ್ಷಣ ಹನಿಗಳು ವಿಶ್ವ ದರ್ಶನ ಮಾಡಿಸಲಿವೆಯೆ ಅನ್ನಿಸಿತು...
ಬಹಳ ಚೆನ್ನಾಗಿ ಬಂದಿದೆ.

Anonymous said...

ಅಸಂಬದ್ಧ ಅಂತ ನೀವು ಹೇಳಿದಿರಿ ಆದರೆ ಎಲ್ಲ ಸಂಬಂದಾಗಳು ಬಂದು ಕಣ್ಮುಂದೆ ನಿಂತವವು.
ಜೊತೆಯಲೇ ಕಣ್ಣಂಚಲಿ ಹನಿಗಳು

Sushrutha Dodderi said...

ಅಸಂಬದ್ಧವಿದ್ದರೂ ಇಷ್ಟೊಂದು ಚೆನ್ನಾಗಿರುವುದರಿಂದಲೇ ಇವು ಎಚ್ಚರವಿದ್ದಾಗಲೆಲ್ಲ ನಿಮ್ಮನ್ನು ಕಾಡುತ್ತವೆ ನೋಡಿ...

Vijendra ( ವಿಜೇಂದ್ರ ರಾವ್ ) said...

ನಾಡಿದ್ದು ಸಿಗ್ತೇವಲ್ಲ.. ಆಗ್ಲೆ ಎಲ್ಲಾ ಹೇಳ್ತೇನೆ..
ಎಲ್ಲಾ ಸೂಪರ್ !!

VENU VINOD said...

super. the last one is brilliant. keep it going
regards
-venu

Anonymous said...

ಭಾವಜೀವಿಗಳೆ,

ನಿಮ್ಮ ಅಸಂಬದ್ಧ ಹನಿಗಳು ತುಂಬಾ ಚನ್ನಾಗಿ ಇದೆ.
"ಕಳೆದದ್ದು ಸಿಕ್ಕಿತೆಂದು
ಕತ್ತಲಲ್ಲಿ ಕೈ ತಡಕಿದೆ
ಏನೂ ಸಿಗದೆ ಕೈ ತೆಗೆದರೆ
ಕೈಗೆಲ್ಲಾ ಹೊಳೆವ ನಕ್ಷತ್ರಗಳು
ಮೆತ್ತಿಕೊಂಡಿದ್ದವು" ನನಗೆ ತುಂಬಾ ಇಷ್ಟವಾದ ಸಾಲುಗಳು.
ಜೀವನ ಹೀಗೆ ಆದರೆ ಎಷ್ಟು ಚಂದ ಕಳೆದಿದ್ದು ಹುಡುಕುವಾಗ ನಕ್ಷತ್ರ ಸಿಕ್ಕಿದರೇ!

ನೀನು ನೆನಪಾಗದೆ
ವರುಷಗಳೆ ಸಂದವು
ಆದರೂ ಇನ್ನೂ ನೀನೇಕೆ
ಆಗಾಗ ಬಿಕ್ಕಳಿಸುತ್ತಿರುವೆ..!?
ಈ ಸಾಲುಗಳು ಎನೇನೋ ಹೇಳುತ್ತವೆ. ಅವನು/ಅವಳು ಅವನಿಗೆ/ಅವಳಿಗೆ ಮರೆತಿಲ್ಲ ಅನ್ನುವುದು ಸಾಬೀತಾದರು,ಅವನು/ಅವಳು ಅವನು/ಅವಳಿಗೆ ಮೋಸ ಮಾಡಿದ ಅರ್ಥಕೊಡುತ್ತದೆ
ಹೀಗೆ ಅಸಂಬದ್ಧ ಹನಿಗಳು ನಮ್ಮ ಮೇಲೆ ಬೀಳುತ್ತಿರಲಿ.

Unknown said...

Last two were very good.ಧನ್ಯವಾದಗಳು

ಭಾವಜೀವಿ... said...

ಕ್ಷಮಿಸಿ ನಾಲ್ಕಾರು ದಿನ ಊರಿನಲ್ಲಿರದ ಕಾರಣ (ಬೆಂಗಳೂರಿಗೆ ಹೋಗಿದ್ದೆ ಅಥವ ಬಂದಿದ್ದೆ) ತಕ್ಷಣ ಉತ್ತರಿಸಲಾಗಲಿಲ್ಲ..

ಸಿಂಧು,
ಸ್ಫೂರ್ತಿ ತುಂಬಿದ ಅಪ್ಯಾಯಮಾನವಾದ ನಿಮ್ಮ ನುಡಿಗಳು ಹೀಗೆ ಸದಾ ನನ್ನ ದಾರಿಯುದ್ದಕ್ಕೂ ಬೆಳದಿಂಗಳಿನಂತೆ ಪಾರುಗಾಣಿಸಲಿ!!

tecfiz (ಓಂಶಿವಪ್ರಕಾಶ್),
ನನ್ನ ಬ್ಲಾಗಿಗೆ ಸ್ವಾಗತ! ಹೀಗೆ ಓದುತ್ತ, ಹುರಿದುಂಬಿಸುತ್ತಾ ಇರಿ.. ಇನ್ನಷ್ಟು ಬರೆದೇನು..!

veda,
ನಿಮಗೂ ನನ್ನ ಬ್ಲಾಗಿಗೆ ಸ್ವಾಗತ..
ನಿಮ್ಮ ಕಣ್ಣಂಚಿನಲಿ ಮೂಡಿದ ಹನಿಯು ನನ್ನ ಕವನಕ್ಕೆ ಸಲ್ಲಿಸಲಾದ ಬಾಷ್ಪಾಂಜಲಿ!! ಧನ್ಯವಾದಗಳು, ನಿಮ್ಮ ಭಾವುಕತೆಗೆ!

ಸುಶ್ರುತ,
ನಿಜ..ಆದರೂ ಒಮ್ಮೆಮ್ಮೆ ಅವು ಕಾಡಲೆಂದೇ ನಾನು ಎಚ್ಚರವಾಗಿರುತ್ತೇನೆಯೆ!!? ಅವು ಕಾಡಿದಷ್ಟು ಮನಸ್ಸಿಗೆ ಮುದ ಹಾಗು ಹೊಸ ಹೊಳಹನ್ನು ನೀಡುತ್ತವೆ..

ವಿಜೇಂದ್ರ,
ಎಲ್ರಿ ಏನೂ ಹೇಳೆ ಇಲ್ಲ..!! :)

venu vinod,
ಧನ್ಯವಾದಗಳು,
ಹೀಗೆ ಬರುತ್ತ ಇರಿ..ಹಾಗೂ ನೀವು ಸಹ ಬರೆಯುತ್ತಾ ಇರಿ..

ranju,
ಬಹಳ ದಿನಗಳ ನಂತರ ಮತ್ತೊಮ್ಮೆ ಸ್ವಾಗತ!
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ,
ಹೌದು, ಕತ್ತಲೆಯಲ್ಲಿ ಸದಾ ನಕ್ಷತ್ರಗಳು ಇರುತ್ತವೆ ಎನ್ನುವುದೊಂದು ನಮ್ಮ ಬದುಕಿನ ನೋವದ್ದಿದ ಕ್ಷಣಗಳಿಗೆ ಆಶಾವಾದದ ಕಂದೀಲು.. ಹುಡುಕುವ ತಾಳ್ಮೆ ಹಾಗು ಧೈರ್ಯ ಬೇಕಷ್ಟೆ..
ಕವನಗಳು ಸಾರ್ಥಕವಾಗುವುದು ಓದುಗರ ಮನಹೊಕ್ಕಿ ಹೊಸ ರೂಪ ಅರ್ಥದೊಂದಿಗೆ ಹೊರ ಬಂದಾಗ.. ಪ್ರತಿಯೊಬ್ಬ ಓದುಗನಲ್ಲಿಯೂ ಒಬ್ಬೊಬ್ಬ ಕವಿ ಇರುತ್ತಾನೆ ಎಂಬುದಕ್ಕೆ ನಿಮ್ಮ ವಿಮರ್ಷೆಯೇ ಸಾಕ್ಷಿ..
ಓದಲು, ಬೆನ್ನು ತಟ್ಟಲು ನೀವೆಲ್ಲಾ ಇರುವಾಗ ಬರೆಯಲು ನನಗೇನು..!!

raghu,
ಸುಸ್ವಾಗತ ನನ್ನ ಬ್ಲಾಗಿಗೆ ಹಾಗು
ಅಭಾರಿ ನಿಮ್ಮ ಮಾತುಗಳಿಗೆ.. ಹೀಗೆ ಬರುತ್ತಾ ಇರಿ

ಮನಸ್ವಿನಿ said...

ಕಳೆದದ್ದು ಸಿಕ್ಕಿತೆಂದು
ಕತ್ತಲಲ್ಲಿ ಕೈ ತಡಕಿದೆ
ಏನೂ ಸಿಗದೆ ಕೈ ತೆಗೆದರೆ
ಕೈಗೆಲ್ಲಾ ಹೊಳೆವ ನಕ್ಷತ್ರಗಳು
ಮೆತ್ತಿಕೊಂಡಿದ್ದವು

ಇದು ತುಂಬಾ ಇಷ್ಟ ಆಯ್ತು

Anonymous said...

erratically interesting.. yeah.. they are not all that asambadda to be unrelated.. I liked them actually..

In fact, I never thought things so unrelated would be so much fun together! :)

-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/

Unknown said...

ಹಲೋ... ಶಂಕರ್. ನಿಮ್ಮ ಒಂದಿಷ್ಟು ಹನಿಗಳು ನಿಜವಾಗಿಯೂ ಖುಷಿ ಕೊಟ್ಟವು. ರಿಯಲಿ ಗುಡ್! ಆದರೆ, ಅಷ್ಟೊಂದು ಸುಸಂಬಂಧ ಚುಟುಕುಗಳನ್ನು ನೀವು ಅಸಂಬದ್ಧ ಎನ್ನುವುದಕ್ಕಿಂತ ಬೇರೆ ಏನಾದರೂ 'ವಿಪರ್ಯಾಸ' ಅಥವಾ 'ವಿಲಕ್ಷಣ' ಹೆಚ್ಚು ಪೂರಕ ಅರ್ಥ ಬರುತ್ತಿತ್ತೇನೋ. ಒಕೆ. ಥ್ಯಾಂಕ್ಯೂ..
ಶಶಿ ಸಂಪಳ್ಳಿ
'ಮಲೆಯ ಮಾತು'

ಶ್ರೀ said...

ನಿಮ್ಮ ಹನಿಗಳನ್ನು ಓದಿದಾಗ,

ಇಂಥಾ ಹನಿಗಳನ್ನು
ಹೊರತಂದವರ
ಕುಂಚದ
ಹನಿಯಾಗುವಾಸೆ - ಆಗ್ತಿದೆ ಮಾರಯ್ರೆ.. ಅಸಂಬದ್ಧ ಹನಿಗಳೇ ಸಂಬಂಧ ಕುದುರಿಸಿಯಾವು..

ತುಂಬಾಚೆನ್ನಾಗಿದೆ.

ಭಾವಜೀವಿ... said...

ಮನಸ್ವಿನಿ,
ಓ ಗೊತ್ತಾಯ್ತು ಬಿಡು, ಉಳಿದವು ಚೆನ್ನಾಗಿಲ್ಲ.. ಇನ್ನು ಮುಂದೆ ಬರೀ ಇಂತವೇ ಬರಿ ಅಂತಾನ ನಿನ್ನ ಅರ್ಥನಾ!? ;)
ಎನಿ ವೇ ನಿನಗೆ ಆ ಸಾಲುಗಳು ಇಷ್ಟ ಆಗಿದ್ದು ಸಂತೋಷ ಆಯ್ತು!

prema,
Thanks for visiting my blog and leaving a comment.
Glad to have your appreciating words!
Infact I wanted to give some wierd name, so it will catch people's eye! and regarding quillpad, it is realy great tool.

ಶಶಿ,
ನನ್ನ ಬ್ಲಾಗಿಗೆ ಸ್ವಾಗತ!
ಧನ್ಯವಾದಗಳು ನಿಮ್ಮ ಸಲಹೆ ಹಾಗು ಪ್ರಶಂಸೆಗೆ!... ಆ ಸಮಯದಲ್ಲಿ ಆ ಹೆಸರು ಮನಸ್ಸಿಗೆ ಬಂತು ಅಷ್ಟೆ, ಹೆಚ್ಚೇನೂ ತಲೆ ಕೆಡಿಸಿಕೊಳ್ಳೋದಿಕ್ಕೆ ಹೋಗದೆ ಅದನ್ನೆ ತಲೆಬರಹವನ್ನಾಗಿಸಿ ಅಷ್ಟೆ!

ಶ್ರೀ!
ನಿಮಗೂ ನನ್ನ ಬ್ಲಾಗಿಗೆ ಸುಸ್ವಾಗತ!
ಓಹ್..!! ನಿಜಕ್ಕೂ ಅದ್ಭುತವಾದ ಆಸೆ/ಕಲ್ಪನೆ!! 'ಕಲಾಕಾರನ ಕುಂಚದ ಹನಿಯಾಗುವುದು' ನಿಜಕ್ಕೂ ಉನ್ನತವಾದ ಹಾಗು ಸೃಜನಶೀಲವಾದ ಆಸೆ! ಅಲ್ಲೆ ಕುಂಚಕ್ಕೂ, ಹನಿಗೂ ಹಾಗು ಚಿತ್ರಕ್ಕೂ ಸಾರ್ಥಕತೆ ಅಲ್ಲವೇ!?
ಇನ್ನು ಸಂಬಂಧದ ಬಗ್ಗೆ, ಆ ಸಮುದ್ರಕ್ಕೆ ಈ ಹನಿಗಳು ಕಾರಣವಾದರೆ ಅವು ಹುಟ್ಟಿದ್ದಕ್ಕೂ ಸಾರ್ಥಕತೆ ಬಂದೀತು!!
ನನ್ನ ನಿಮ್ಮ ಸಂಬಂಧ ಸದಾ ಚಿರನೂತನವಾಗಿರಲಿ!!

Seema S. Hegde said...

ತುಂಬಾ ತುಂಬಾ ಚೆನ್ನಾಗಿವೆ... ಅಸಂಬದ್ಧ ಅಂತ ಅನಿಸುತ್ತಿಲ್ಲವಲ್ಲ?!! :)

ಭಾವಜೀವಿ... said...

ಸೀಮಾ,
ಸ್ವಾಗತ ನನ್ನ ಬ್ಲಾಗಿಗೆ!
ಧನ್ಯವಾದಗಳು ನಿಮ್ಮ ಅಭಿನಂದನೆಗಳಿಗೆ!
ತುಂಬಾ ದಿನಗಳಾಯ್ತು ನಾನು ಬ್ಲಾಗ್ ಅಪ್ಡೇಟ್ ಮಾಡದೆ! ನೋಡಿ ನನಗೆ ಬೇಜಾರಾಗ್ತಾ ಇದೆ! ಊಟವಿಲ್ಲದೆ ಮಗುವಿನಂತೆ ಮಂಕಾಗಿ ಕುಳಿತಿದೆ ನನ್ನ ಬ್ಲಾಗ್! :( ಒಂದಿಷ್ಟು ಬಿಡುವಾಗಲೆಂದು ಕಾಯುತ್ತಿದ್ದೇನೆ, ಮೈಗೆ, ಮನಸ್ಸಿಗೆ!

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...

ಚೆನ್ನಾಗಿದೆ.

ನನ್ನ ಬ್ಲಾಗ್ ಡಿಯರ್ ಫ್ರೆಂಡ್,

http://kavimanasu.blogspot.com/

ಸಿಂಧು sindhu said...

ಭಾವಜೀವಿಯವರೆ,

ಎಲ್ಲಿ ಹೋಗಿದ್ದೀರಿ..ಯಾಕೆ ಏನೂ ಬರೆದಿಲ್ಲ.. ಹುಷಾರಾಗಿದ್ದೀರಾ? ನಿಮ್ಮ ಬರಹಗಳು ಮನದ ಸಂಜೆಯಲ್ಲಿ ಹಿತವಾಗಿ ಕೇಳಿಸುವ ರಾಗಗಳಂತೆ... ಬರೀರಿ..

ಪ್ರೀತಿಯಿರಲಿ,
ಸಿಂಧು.

ಭಾವಜೀವಿ... said...

ಸಿಂಧು,
ನಿಮ್ಮ ಆಗ್ರಹ ಹಾಗು ನೀವಿಟ್ಟ ವಿಶ್ವಾಸಕ್ಕೆ ಸದಾ ಋಣಿ!
ಒಂದಿಷ್ಟು ವೈಯಕ್ತಿಕ ತೊಂದರೆಗಳು,ಜವಾಬ್ದಾರಿಗಳು ಹಾಗು ಬಹಳಷ್ಟು ಕೆಲಸ ಒಟ್ಟಿಗೆ ಅಮರಿಕೊಂಡಿದ್ದರಿಂದಲೂ ಹಾಗೂ ಹೇಳಿಕೊಳ್ಳುವಂತದ್ದೇನೂ ಮನಕ್ಕೆ ಹೊಳೆಯದೇ ಇದ್ದಿದ್ದರಿಂದ ಏನೂ ಬರೆಯದೆ ಖಾಲಿ ಕುಳಿತು ಬಿಟ್ಟೆ!
ಮೊನ್ನೆ ನಿಮ್ಮ ಬ್ಲಾಗ್ ಓದುವಾಗ ನಿಜಕ್ಕೂ ಹೊಟ್ಟೆ ಕಿಚ್ಚಾಗಿ ನಾನೂ ಬರೆಯಲೇ ಬೇಕು ಎಂದು ಹಟ ಹಿಡಿದ್ದೇನೆ!
ಬರೆದು ಪೋಸ್ಟ್ ಮಾಡಿದಾಗ ನಿಮಗೆ ಖಂಡಿತ ತಿಳಿಸುತ್ತೇನೆ.

ಋಣಿ

Karthik CS said...

ಸಾರ್, ನಿಮ್ಮ ಕವನಗಳ ಸಂಕಲನ ಬಹಳ ಚೆನ್ನಾಗಿದೆ. ಪೂರ ಇನ್ನೂ ಓದಿಲ್ಲ. ಅಷ್ಟ್ರಲಿ ಖುಶಿಯಾಯ್ಯ್ತು .. ಹಾಗೇ ಸುಮ್ಮನೆ ಪೋಸ್ಟಿಸಿದೆ.

ಸುನಿಲ್ ಜಯಪ್ರಕಾಶ್ said...

ಭಾವಜೀವಿ, ಸಖತ್ತಾಗಿದೆ "ಅಸಂಬದ್ಧ" ಹನಿಗಳು. ಈ ಹನಿಗಳು, ತಂಗಾಳಿಯನ್ನು ಸೂಸಿತ್ತಿವೆಯೇನೋ ಎಂದೆನಿಸಿ, ಅಗೋ, ಆ ನಕ್ಷತ್ರದ ಜೇನಹನಿ ಸವಿ-ಹಾಲೆರೆದಂತಾಯಿತು.