Tuesday, April 3, 2007

ಹುಚ್ಚು ಪ್ರೀತಿ

ಇಬ್ಬನಿಯೊಂದು ನಿನ್ನ ಹಣೆಯನು ಸೋಕಿದಾಗ
ತಿಳಿಗೊಳದಲಿ ಚಂದ್ರನ ಬಿಂಬ ಕಂಡಾಗ
ತಂಪು ಮರಳಿನಲಿ ನಿನ್ನ ಪಾದಮುಳುಗಿದಾಗ
ಗುಲಾಬಿಯೊಂದು ಅರೆ ಬಿರಿದು ನಕ್ಕಾಗ
ನನ್ನ ಸಾಲುಗಳೆಲ್ಲಾ ನಿನಗೆ ತಲುಪಿದಾಗ
ಈ ನನ್ನ ಹುಚ್ಚು ಪ್ರೀತಿ ನಿನಗೂ ತಾಗೀತು


ಕತ್ತಲು ಬಳ್ಳಿ ನಿನ್ನ ಕಾಲಿಗೆ ತೊಡರಿದಾಗ
ಕಣ್ಣುಗಳಲಿ ಕನಸುಗಳೇ ಬೀಳದಿದ್ದಾಗ
ಕನ್ನಡಿ ಸುಳ್ಳು ಹೇಳಲು ಶುರುವಿಟ್ಟಾಗ
ನಿನ್ನ ಆ ಗುಲಾಬಿ ಅರಳದೇ ಬಾಡಿದಾಗ
ನಿನ್ನದೇ ನೆರಳು ನಿನಗೆ ಕಾಣದಾದಾಗ
ಈ ನನ್ನ ಹುಚ್ಚು ಪ್ರೀತಿ ನಿನಗೂ ನೆನಪಾದೀತು

14 comments:

Sushrutha Dodderi said...

ಸೂಪ್ಪರ್ರ್!

Vijendra ( ವಿಜೇಂದ್ರ ರಾವ್ ) said...

ಚೆನ್ನಾಗಿದೆ ಕವನ.. ಎರಡು ಸಲ ಒದಬೇಕಾಯ್ತು ಪೂರ್ತಿ ಅರ್ಥವಾಗ್ಲಿಕ್ಕೆ.

ಇರಲಿ ಬಿಡಿ.. ಅದು ಯಾರು ಅಂಥ ಹೇಳಿ.. ಎಷ್ಟೆ ಕಷ್ಟ ಅದ್ರೂ ನಿಮ್ಮ ಪ್ರೀತಿ ಅವ್ಳಿಗೆ ಅರ್ಥ ಆಗೊ ತರ ಬಿಡಿಸಿ ಹೇಳ್ತೇನೆ..

ಭಾವಜೀವಿ... said...

ಧನ್ಯವಾದಗಳು ಸುಶ್ರುತ್!!

ವಿಜೇಂದ್ರ ರಾಯರೆ!
ಮೊದಲು ಧನ್ಯವಾದಗಳನ್ನು ಹೇಳಿಬಿಡ್ತೀನಿ ನಿಮ್ಮ ಪ್ರತಿಕ್ರಿಯೆಗೆ....!!
ಇಲ್ಲಾರಿ ಅಂತಾದ್ದೇನೂ ಇಲ್ಲ.. !!
ಅದೇ ಬೇಸರ... ನನಗೆ ಅಂಥಾ ಹುಚ್ಚು ಅಥವ ಹೆಚ್ಚು ಪ್ರೀತಿ ಆಗಲು ಅಥವ ಆಗಿಸಲು ಅವಕಾಶ ಸಿಗಲಿಲ್ಲ ಅಂತ!! ನೋಡೋಣ ಮುಂದೊಂದು ದಿನ...!!
ಮೊಗ್ಗಂತೂ ಅರಳಿದೆ.. ನೋಡೋಣ ಏನಾದೀತೆಂದು!!

ಸಿಂಧು sindhu said...

ಕವಿತೆ ಚೆನ್ನಾಗಿದೆ ಭಾವಜೀವಿಯವರೆ.. ನನಗೆ ಮುಖೇಶ್ ಹಾಡಿದ.. ಕೋಯಿ ಜಬ್ ತುಮಾರಾ ಹೃದಯ್ ಛೋಡ್ ದೇ..ದರ್ ಪನ್ ತುಮೇ ಜಬ್ ಡರಾನೇ ಲಗೇ.. ನೆನಪಾಗುತ್ತಿದೆ.. ಹೀಗೆ ವಿಷಾದದಲ್ಲಿ ಅದ್ದಿ ತೆಗೆದ ಕವಿತೆಯನ್ನು ಬರೆದ ಆ ಕವಿ ಯಾರೋ ಗೊತ್ತಿಲ್ಲ.. ನಿಮ್ಮ ಕವಿತೆ ಕಲ್ಪನೆ ಭಾವನೆ ತುಂಬ ಚೆನ್ನಾಗಿದೆ..

Anonymous said...

Aha... poorvaardhada aa pada punjagala kampu... Utharaardhada duguda manada thalaku...!!!
sarala.. sundara... manamuttuvantide...
Hats off... Keep it up...

Subrahmanya said...

Aha... poorvaardhada aa pada punjagala kampu... Utharaardhada duguda manada thalaku...!!!
sarala.. sundara... manamuttuvantide...
Hats off... Keep it up...

ಸುಪ್ತದೀಪ್ತಿ suptadeepti said...

"ಕನ್ನಡಿ ಸುಳ್ಳು ಹೇಳಲು ಶುರುವಿಟ್ಟಾಗ.." ಆಹಾ! ಹೆಣ್ಣಿನ ಮನಸ್ಸಿಗೆ ಹತ್ತಿರವಾದ ಕನ್ನಡಿಯನ್ನು ಚೆನ್ನಾಗಿ ಬಳಸಿದ್ದೀರಿ. ಚೆನ್ನಾಗಿದೆ.

Shiv said...

ಭಾವಜೀವಿಯವರೇ,

ಜನವರಿಯ ನಂತರ ನಿಮ್ಮ ಬ್ಲಾಗ್‍ನಲ್ಲಿ ತುಂಬಾ ದಿವಸ ಎನೋ ಸಿಗದೆ ವಾಪಾಸ್ ಹೋಗಿದ್ದೆ.ಈಗ ನೋಡಿದರೆ ಸಾಕಷ್ಟಿದೆ.
ಅದು ಬೇರೆ ನಡುವೆ ಪ್ರೀತಿಯಂದರೆ ಎನು ಅಂತಾ ವ್ಯಾಖಾನನೂ ಇದೆ.

ಕವನದ ಬಗ್ಗೆ ಜಾಸ್ತಿ ಎನು ಹೇಳಬೇಕು..ಯಾವಾಗಲೂ ಚೆನ್ನಾಗಿದೆ ಅನ್ನೋ ತರದ ಭಾವನೆಗಳನ್ನ ಬರೆಯುತ್ತಿದ್ದೀರಾ..ಹೀಗೆ ಸಾಗಲಿ

ಅದರೆ ಒಂದು ಮಾತು ನಿಜ..
ಪ್ರೀತಿ ಎಲ್ಲೆ ಇದ್ದರೂ ಅದರ ಒಂದು ಸ್ಪರ್ಶ ಆಗೇ ಆಗುತ್ತಂತೆ..ನಿಮ್ಮ ಮನದ ಪ್ರೀತಿ ನಿಮಗೆ ಬೇಕಾದವರು ಎಲ್ಲೆ ಇದ್ದರೂ ಮುಟ್ಟೆ ಮುಟ್ಟುತ್ತೆ..

Enigma said...

chenangide nimma kavan

..... said...

Awesome feel..!
Nice one...

Innashtu barali...bhaava rasa dautana emagella..!

Pramod P T said...

ಮುಂದುವರೆಯಲಿ ಶಂಕರ್! ಚೆನ್ನಾಗಿದೆ.

ಭಾವಜೀವಿ... said...

@ ಸಿಂಧು..
ಆಭಾರಿ ನಿಮ್ಮ ಅಭಿಪ್ರಾಯಕ್ಕೆ.. ನಾನು ಸಹ ಮುಖೇಶನ ಅಭಿಮಾನಿ! ಆತನ ಎಷ್ಟೋ ಹಾಡುಗಳನ್ನು ಕೇಳುತ್ತಾ ಕಣ್ಣೀರಾಗಿದ್ದೇನೆ!

subramanya,
ಧನ್ಯವಾದಗಳು ಗೆಳೆಯಾ..!! ನೀನಿಕಡೆ ಬರೋದೆ ಬಹಳ ಅಪ್ರೂಪ ಆಗೋಯ್ತಲ್ಲೋ ಮಾರಾಯ!!

suptadeepthi,
ನಿಜ ಹೆಣ್ಣಿನ ಕೋಣೆಯಲ್ಲಿರುವ ಕನ್ನಡಿಗಿಂತ ಅಮೂಲ್ಯವಾದ ವಸ್ತು ಸಂಗಾತಿ ಯಾವುದಿದೆ ಹೇಳಿ.. !! ಧನ್ಯವಾದಗಳು ನಿಮ್ಮ ಪ್ರಶಂಸೆಗೆ!

shiv..
ನಿಜ ಆ ಸಮಯದಲ್ಲಿ ವಿಪರೀತ ಕೆಲಸದ ಒತ್ತಡ ಇದ್ದಿದ್ದರಿಂದ ಏನೂ ಬರೆಯಲಾಗಲಿಲ್ಲ.. ಕ್ಷಮೆಯಿರಲಿ ನಿಮಗೆ ನಿರಾಸೆ ಒದಗಿಸದ್ದಕ್ಕೆ.. ಇನ್ನು ಹಾಗಾಗೊದಿಲ್ಲ ಬಿಡಿ..!! ನಿಮ್ಮೆಲ್ಲರ ಆಗ್ರಹಕ್ಕೆ ನಾನು ಚಿರಋಣಿ!
ನೀವು ಹೇಳಿದ್ದು ಅಕ್ಷರಷಃ ನಿಜ.. ಪ್ರೀತಿಗೆ ಯಾವ ಮಾಧ್ಯಮವಾಗಲಿ, ಯಾರ ಹಂಗಾಗಲಿ ಬೇಕಿರುವುದಿಲ್ಲ.. ಅದು ಅನಂತ ಹಾಗು ಅನವರತ, ಬಿಲ್ಲಿನಿಂದ ಹೊರಟ ಶರದಂತೆ ತನ್ನ ಗುರಿಯನ್ನು ತಲುಪಿಯೇ ತೀರುತ್ತದೆ!

enigma..
ಬಹಳ ಸಂತೋಷವಾಯಿತು ನಿಮ್ಮ ಅಭಿಪ್ರಾಯದಿಂದ.. ಹೀಗೆ ಬರುತ್ತಾ ಇರಿ..

let me feel..
ಎಂದಿನಂತೆ ಸ್ಫೂರ್ತಿ ತುಂಬಿದ ನಿಮ್ಮ ಪ್ರಶಂಶೆ, ಹಾರೈಕೆಗೆ ನಾನು ಋಣಿ! ನಿಮಗೆಂದಿಗೂ ನಿರಾಸೆ ಆಗದಂತೆ ನೋಡಿಕೊಳ್ತೀನಿ ಬಿಡಿ!

ಪ್ರಮೋದ್..
ಬಹಳವೇ ಸಂತೋಷ, ಕುಂಚ ಮಾಂತ್ರಿಕ :)!

Anonymous said...

Kattalalli balli ninna kaalige thodaridaagaa....agbekitteno alvaa?

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...

Nice
Dear Friend.

My Blog

http://kavimanasu.blogspot.com/